Breaking News

ಪಟಿಯಾಲಾ ಸೀನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಹರ್ಡಲ್ಸ್, ಕೇರಳದ ಅನು ದಾಖಲೆ, ಕರ್ನಾಟಕದ ಅರ್ಪಿತಾಗೆ ಕಂಚು

ಕರ್ನಾಟಕದ ಎಮ್. ಅರ್ಪಿತಾ ಪಟಿಯಾಲಾದಲ್ಲಿ ನಡೆಯುತ್ತಿರುವ ೨೧ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಮಹಿಳೆಯರ ೪೦೦ ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಅರ್ಪಿತಾ ೫೭.೫೧ ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕ ಎತ್ತಿ ಹಿಡಿದರು. ಇದೇ ವಿಭಾಗದ ಚಿನ್ನದ ಪದಕ ವನ್ನು ಕೇರಳದ ಆರ್. ಅನು ಕಾಲ: ೫೭.೩೯ಸೆ. ಗೆದ್ದುಕೊಂಡರು. ಅಲ್ಲದೇ ಅವರು ನೂತನ ಕೂಟ ದಾಖಲೆ ನಿರ್ಮಿಸಿದರು. ೧೫ ವರ್ಷದ ಹಿಂದೆ ೨೦೦೨ರಲ್ಲಿ ಚೆನ್ನೈನಲ್ಲಿ ನಡೆದ ಟೂರ್ನಿಯಲ್ಲಿ ಸಾಹೇಬನಿ ಒರಮ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಅಳಿಸಿ ಹಾಕಿದರು.
ಮಹಿಳೆಯರ ಹ್ಯಾಮರ್ ಥ್ರೋ ವಿಭಾಗದಲ್ಲಿ ಉತ್ತರಪ್ರದೇಶದ ಸರಿತಾ ಸಿಂಗ್ ಚಿನ್ನ ಗೆಲ್ಲುವ ಜತೆಗೆ ನೂತನ ಕೂಟ ದಾಖಲೆ ನಿರ್ಮಿಸಿದರು.
ಮಂಜು ಬಾಲಾ ೨೦೧೪ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಸರಿತಾ ಮೀರಿದರು. ಜತೆಗೆ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

Related posts

Leave a Reply