Header Ads
Header Ads
Breaking News

ಪಟ್ಲ ಗದ್ದೆಯಲ್ಲಿ ಕುರಲ್ ಪರ್ಬ ಕೃಷಿ ಕಾರ್ಯದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು ಕೃಷಿ ಮತ್ತು ಕ್ರೀಡಾಕೂಟಕ್ಕೆ ಸಚಿವ ಯು.ಟಿ ಖಾದರ್ ಚಾಲನೆ

ತುಂಬೆ ಗ್ರಾಮದ ನೇತ್ರಾವತಿ ನದಿ ಕಿನಾರೆಯಲ್ಲಿರುವ ಪಟ್ಲ ಗದ್ದೆಯಲ್ಲಿ ಕುರಾಲ್ ಪರ್ಬ ನೆರೆದಿದ್ದ ಜನರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಪದ್ಮನಾಭ ಹಾಗೂ ರಾಜೀವಿ ದಂಪತಿಗಳು ಈ ಕಾರ್ಯಕ್ರಮ ಸಂಘಟಿಸಿದ್ದು ತುಂಬೆ ಬಿ.ಎ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಯುವ ರೈತರೆನಿಸಿಕೊಂಡರು.

ಕಂಬಳದ ಕೋಣಗಳನ್ನು ಗದ್ದೆಗಿಳಿಸಿ, ಮಡಿಕೆಯಲ್ಲಿ ತುಂಬಿದ ಹಾಲನ್ನೆರೆದು ಕೃಷಿ ಹಾಗೂ ಕ್ರೀಡಾಕೂಟಕ್ಕೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ಬಳಿಕ ಬಾಕಿಮಾರು ಗದ್ದೆಯಲ್ಲಿ ವಿದ್ಯಾರ್ಥಿಗಳು ಹಾಗೂ ರೈತಾಪಿ ಮಹಿಳೆಯರೊಂದಿಗೆ ಸಚಿವ ಯು.ಟಿ.ಖಾದರ್ ನೇಜಿ ನಾಟಿ ಮಾಡಿದರು. ಸಚಿವರೊಂದಿಗೆ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸಂಜಿತ್, ರಮ್ಲಾನ್ ಹಾಜರಿದ್ದರು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply