Header Ads
Header Ads
Breaking News

ಪಟ್ಲ ಸತೀಶ ಶೆಟ್ಟಿಯವರಿಗೆ ಕಟೀಲು ಮೇಳದಲ್ಲಿ ಅವಕಾಶ ನಿರಾಕರಣೆ : ಯಕ್ಷಗಾನ ಭಾಗವತಿಕೆಗೆ ಕೂತ ಸಂದರ್ಭದಲ್ಲೇ ಎಬ್ಬಿಸಿದ ವ್ಯವಸ್ಥಾಪಕರು

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಯಕ್ಷಗಾನ ಮೇಳಗಳ ತಿರುಗಾಟ ನಿನ್ನೆ ಆರಂಭಗೊಂಡಿದ್ದು, ಕಟೀಲು ಮೇಳದಲ್ಲಿ ಈ ಬಾರಿ ಪ್ರಸಿದ್ಧ ಪಟ್ಲ ಸತೀಶ್ ಶೆಟ್ಟಿಯವರಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ. ಕಟೀಲು ಕ್ಷೇತ್ರದ ಮೇಳಗಳ ಸೇವೆಯಾಟದ ಸಂದರ್ಭದಲ್ಲಿ ಯಕ್ಷಗಾನ ಭಾಗವತಿಕೆಗೆ ಕೂತ ಸಂದರ್ಭದಲ್ಲೇ ವ್ಯವಸ್ಥಾಪಕರು ಪಟ್ಲ ಅವರನ್ನು ರಂಗಸ್ಥಳದಿಂದ ಎಬ್ಬಿಸಿದ್ದಾರೆ. ಕಟೀಲು ಕ್ಷೇತ್ರದ ಆರೂ ಮೇಳಗಳ ತಿರುಗಾಟದ ಆರಂಭದ ಹಿನ್ನೆಲೆಯಲ್ಲಿ ದೇಗುಲ ಆವರಣದಲ್ಲಿ ಸೇವೆಯಾಟ ನಡೆಯುತ್ತಿತ್ತು. ಈ ವೇಳೆ ಬಾಗವತಿಕೆ ಮಾಡಲು ಪಟ್ಲ ಸತೀಶ್ ಶೆಟ್ಟಿಯವರು ರಂಗಸ್ಥಳಕ್ಕೆ ಬಂದಿದ್ದರು. ಈ ವೇಳೆ ಪಟ್ಲರು ಭಾಗವತಿಕೆ ಮಾಡದಂತೆ ತಡೆಯಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಅವಮಾನ ಎನ್ನುವ ಆಕ್ರೋಶ ಅಭಿಮಾನಿಗಳಿಂದ ವ್ಯಕ್ತವಾಗಿದೆ. ಘಟನೆಯಿಂದ ನೊಂದ ಪಟ್ಲ ಸತೀಶ್ ಶೆಟ್ಟಿಯವರು ನೇರವಾಗಿ ದೇವಿ ಸನ್ನಿಧಿಗೆ ತೆರಳಿದ್ದಾರೆ. ಸನ್ನಿಧಿ ಮುಂಭಾಗದಲ್ಲಿ ಪೇಟ ಇರಿಸಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪೇಟವನ್ನು ತೆಗೆದುಕೊಂಡು ಪಟ್ಲ ಸತೀಶ್ ಶೆಟ್ಟಿಯವರು ತೆರಳಿದ್ದಾರೆ ಎಂದು ತಿಳಿದುಬಂದಿದೆ.

 

Related posts

Leave a Reply

Your email address will not be published. Required fields are marked *