Header Ads
Header Ads
Header Ads
Breaking News

ಪಡುಪಣಂಬೂರು ರಾ.ಹೆದ್ದಾರಿಯಲ್ಲಿ ಕ್ರಾಸಿಂಗ್ ಸಮಸ್ಯೆ ಕ್ರಾಸಿಂಗ್ ನಿರ್ಮಾಣ ಮಾಡದೆ ೮ ಜೀವ ಬಲಿಯಾಗಿವೆ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಆರೋಪ

ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಜ್ಞಾನಿಕವಾಗಿ ರಸ್ತೆ ಕ್ರಾಸಿಂಗ್‌ನ್ನು ನಿರ್ಮಾಣ ಮಾಡದ ಕಾರಣ ೮ ಜೀವಗಳು ಬಲಿಯಾಗಿದೆ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಆರೋಪಿಸಿದರು.

ಹಳೆಯಂಗಡಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೈಜ್ಞಾನಿಕವಾಗಿ ರಸ್ತೆ ಕ್ರಾಸಿಂಗ್ ಮಾಡಬೇಕೆಂದು ಸೆ.೯ರಂದು ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್ ಹಕ್ಕೊತ್ತಾಯದ ಪ್ರತಿಭಟನೆಗೆ ಹೆದರಿ ಈಗ ಕಾಮಗಾರಿಗೆ ಮುಂದಾಗಿದೆ ಬಿಜೆಪಿ ಸಂಸದ ಹೆದ್ದಾರಿ ಇಲಾಖೆಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ನಂ ಒಂದನೇ ಸಂಸದರು ಎಂದು ಹೇಳಿಕೊಂಡಿರುವ ನಳಿನ್‌ಕುಮಾರ್ ಕಟೀಲು ಅವರು ಹೆದ್ದಾರಿಯ ಅವೈಜ್ಞಾನಿಕ ಕ್ರಾಸಿಂಗ್‌ನ ಬಗ್ಗೆ ಈವರೆಗೂ ಚಕಾರ ಎತ್ತದೇ ಇದೀಗ ರಾಜಕೀಯ ನಡೆಸುತ್ತಿದೆ.

ಈ ಕ್ರಾಸಿಂಗ್ ಬಗ್ಗೆ ಪಡುಪಣಂಬೂರು ಪಂಚಾಯತ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಆದರೆ ಪ್ರಯೋಜನವಾಗಿಲ್ಲ, ಆ ಸಂದರ್ಭ ಶಾಸಕ ಅಭಯಚಂದ್ರ ಜೈನ್ ರನ್ನು ಬೇಟಿಯಾಗಿ ಸಮಸ್ಯೆಯನ್ನು ತಿಳಿಸಿದ್ದೇವೆ ಕೂಡಲೇ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವೈಜ್ಞಾನಿಕ ಕ್ರಾಸಿಂಗ್ ನಿರ್ಮಿಸುವಂತೆ ತಿಳಿಸಿದ್ದಾರೆ, ಹೆದ್ದಾರಿ ಇಲಾಖೆ ನಮ್ಮನ್ನು ಸಂಪರ್ಕಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ ಅದರಂತೆ ಕಾಮಗಾರಿ ಪ್ರಾರಂಭಿಸಿದ್ದಾರೆ, ಮುಂದಿನ ಒಂದು ತಿಂಗಳ ಅವದಿಯಲ್ಲಿ ಕ್ರಾಸಿಂಗ್‌ನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸದಿದ್ದರೇ ಬೃಹತ್ ಪ್ರತಿಭಟನೆಗೆ ಮುಂದಾಗಲಿದೆ ಎಂದರು. ಹೆಜಮಾಡಿಯಲ್ಲಿ ಟೋಲ್ ನಿರ್ಮಾಣವಾದ ನಂತರ ಮುಕ್ಕ ದಲ್ಲಿರುವ ಟೋಲ್‌ನ್ನು ಬಂದ್ ಮಾಡುತ್ತೇವೆ ಎಂದು ಸಂಸದರು ಭರವಸೆ ನೀಡಿದ್ದರು ಆದರೆ ಇನ್ನೂ ಮುಚ್ಚಲಿಲ್ಲ ೭೨ ಕಿ.ಮೀ. ಅಂತರದಲ್ಲಿ ನಾಲ್ಕು ಟೋಲ್ ಇದೆ. ಮೂಲ್ಕಿ, ಹಳೆಯಂಗಡಿ, ಮುಕ್ಕದ ಪ್ರದೇಶದಲ್ಲಿ ಹೆದ್ದಾರಿ ಇಲಾಖೆ ಸರ್ವಿಸ್ ರಸ್ತೆ ಸಹಿತ ಕಾಮಗಾರಿ ಪೂರ್ಣಗೊಳಿಸಿಲ್ಲ ಇದೂ ಪೂರ್ಣಗೊಳ್ಳಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಾಹಿತಿ ತಂತ್ರ ಜ್ಞಾನ ಘಟಕದ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸಾಹುಲ್ ಹಮೀದ್ ಕದಿಕೆ, ಪಡುಪಣಂಬೂರು ಗ್ರಾಮ ಸಮಿತಿಯ ಸವಿತಾ ಶರತ್ ಬೆಳ್ಳಾಯರು, ಪಂ. ಸದಸ್ಯ ಉಮೇಶ್ ಪೂಜಾರಿ, ಮೂಲ್ಕಿ ನ.ಪಂ. ಸದಸ್ಯರಾದ ಪುತ್ತುಬಾವ, ವಿಮಲ ಪೂಜಾರಿ, ಹಳೆಯಂಗಡಿ ಪಂ. ಅಧ್ಯಕ್ಷ ಜಲಜಾ, ಜಿ.ಪಂ. ಅಧ್ಯಕ್ಷೆ ಸುಗಧಿ ಎಸ್. ಕೊಂಡಾಣ, ವಿವಿಧ ಘಟಕದ ಸದಸ್ಯರು, ಸಮಿತಿಯ ಸದಸ್ಯರು, ಕಾರ್ಯಕರ್ತರು ಇದ್ದರು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply