Header Ads
Header Ads
Breaking News

ಪಡುಬಿದ್ರಿ:ಒತ್ತಡಕ್ಕೆ ಮಣಿದು ಸುಳ್ಳು ದೂರು..!

ಯುವಕರ ತಂಡವೊಂದು ಸಿಬ್ಬಂದಿಗಳ ಬೋನಸ್ ಬಗ್ಗೆ ನಮ್ಮನ್ನು ನಿಲ್ಲಿಸಿ ವಿಚಾರಿಸಿದ್ದು ಹೌದು, ದಮ್ಕಿ ನೀಡಿದ್ದಾರೆ ಎಂಬುದಾಗಿ ನಾನು ಒತ್ತಡಕ್ಕೆ ಮಣಿದು ಪೊಲೀಸ್ ದೂರು ನೀಡಿದ್ದು, ಅದನ್ನು ವಾಪಾಸು ಪಡೆಯುವುದಾಗಿ ಪಡುಬಿದ್ರಿ ಠಾಣೆಗೆ ಯುಪಿಸಿಎಲ್ ಗುತ್ತಿಗೆ ಆಧಾರ ಕಂಪನಿ ಪವರ್ ಮೇಚ್ ಸೈಟ್ ಇಂಜಿಯರ್ ಜಿ. ಪೆಂಚೆಲ್ ಪಾಡ್ಯಾ ಠಾಣೆಗೆ ಲಿಖಿತ ಅರ್ಜಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ನಂದಿಕೂರು ದೇವಸ್ಥಾನದ ಸ್ವಾಗತ ಗೋಪುರ ಸಮೀಪ ಪ್ರತೀಕ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕಿರಣ್ ಕುಮಾರ್ ಹಾಗೂ ಇನ್ನೋರ್ವ ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಪವರ್ ಮೇಚ್ ಕಂಪನಿಯ 7ಮಂದಿ ಸಿಬ್ಬಂದಿಗಳಿಗೆ ಬೋನಸ್ ನೀಡದೆ ವಂಚಿಸಲಾಗಿದೆ, ಅವರಿಗೆ ತಕ್ಷಣವೇ ಬೋನಸ್ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ ಎಂಬುದಾಗಿ ಕಂಪನಿಯ ಸೈಟ್ ಇಂಜಿನಿಯರ್ ಜಿ. ಪೆಂಚೆಲ ರೆಡ್ಡಿ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದರು. ಇದೀಗ ಆ ದೂರು ಸುಳ್ಳು ಎಂಬುದಾಗಿ ಸ್ವತಃ ದೂರುದಾರನೇ ಪ್ರತಿಯಾಗಿ ಠಾಣೆಗೆ ಅರ್ಜಿ ನೀಡುವ ಮೂಲಕ ಪ್ರಕರಣ ತಿರುವು ಪಡೆದುಕೊಂಡಿದೆ.

ಈ ಬಗ್ಗೆ ಮಾತನಾಡಿದ ದೀಪಕ್ ಕೋಟ್ಯಾನ್ ಇನ್ನಾ, ನಂದಿಕೂರಿನಿಂದ ಸಂಜೆ ಹೊತ್ತು ಬಂದ ಪೋನ್ ಕರೆಗೆ ಸ್ಪಂಧಿಸಿ, ಸ್ಥಳಕ್ಕೆ ಹೋದಾಗ ಗುತ್ತಿಗೆ ಕಂಪನಿಯ ಸೈಟ್ ಇಂಜಿಯಾರ್ ಪೆಂಚಲ್ ಪಾಡ್ಯಾರೊಂದಿಗೆ ನನ್ನ ಮಿತ್ರರು ಮಾತನಾಡುತ್ತಾ, ೭ ಮಂದಿ ಕಂಪನಿಯ ಸಿಬ್ಬಂದಿಗಳಿಗೆ ಬೋನಸ್ ನೀಡುವಂತೆ ಒತ್ತಾಯಿಸುತ್ತಿದ್ದರು. ನಾನಾ ಕೂಡಾ ಮಾತನಾಡಿ ಅಧಿಕಾರಿಯ ಮನವೊಲಿಸಿ ಕಂಪನಿಯ ಮೇಲಾಧಿಕಾರಿಗಳಿಗೆ ಪೋನಾಯಿಸಿ ಅವರ ನಿರ್ಧೇಶನದಂತೆ ಕೆಲವೇ ದಿನಗಳಲ್ಲಿ ಬೋನಸ್ ನೀಡಲು ಒಪ್ಪಿ ಅಲ್ಲಿಂದ ತೆರಳಿದ್ದರು. ಆದರೆ ಏಕಾಏಕಿ ಯಾರದ್ದೋ ಒತ್ತಡಕ್ಕೆ ಮಣಿದ ಅಧಿಕಾರಿ ಸುಳ್ಳು ದೂರನ್ನು ನೀಡಿ, ನಮ್ಮ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ. ಸಮಾಜೋಮುಖಿ ಕಾರ್ಯಗಳನ್ನು ಮಾಡುತ್ತಿರುವ ನಮ್ಮ ಸೇವೆಯನ್ನು ಸಹಿಸದ ಸ್ಥಳೀಯ ಕೆಲ ರಾಜಕೀಯ ಮಂದಿ ನಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿ ಬರಹಗಳನ್ನು ಹರಿಯ ಬಿಡುತ್ತಿದ್ದು, ಈ ಬಗ್ಗೆ ಸುಳ್ಳು ದೂರು ನೀಡಿದ ಕಂಪನಿಯ ಪ್ರಮುಖರಲ್ಲಿ ಮಾತನಾಡಿದಾಗ ಸ್ವತಃ ದೂರುದಾರರೇ ತನ್ನ ತಪ್ಪನ್ನು ಒಪ್ಪಿಕೊಂಡು ದೂರು ಹಿಂದೆ ಪಡೆಯುವ ನಿರ್ಧಾರ ಮಾಡಿ ಪಡುಬಿದ್ರಿ ಠಾಣಾಧಿಕಾರಿಗಳಿಗೆ ಈ ಬಗ್ಗೆ ಲಿಖಿತ ಅರ್ಜಿ ನೀಡುವ ಮೂಲಕ ನಮ್ಮ ವಿರುದ್ಧ ಷಡ್ಯಾಂತ್ರ ನಡೆಸಿದ ರಾಜಕೀಯ ಮಂದಿಗೆ ತಕ್ಕ ಉತ್ತರ ನೀಡಿದ್ದಾರೆ. ಇದರಿಂದ ನಮಗೆ ಮತ್ತಷ್ಟು ಸಮಾಜಸೇವೆ ನಡೆಸಲು ಪ್ರೇರಣೆ ದೊರೆತಂತ್ತಾಗಿದೆ. ಸಾಮಾಜಿಕ ತಾಣದಲ್ಲಿ ಮಾನಹಾನಿ ಬರಹ ಹರಿಯಬಿಟ್ಟವರ ವಿರುದ್ಧ ಸೈಬರ್ ಕ್ರೈಂ ಗೆ ದೂರು ನೀಡುವುದಾಗಿ ದೀಪಕ್ ಕೋಟ್ಯಾನ್ ತಿಳಿಸಿದ್ದಾರೆ.
ಕ್ಲಿಪ್ ವಾಟ್ಸಾಪ್ ನಲ್ಲಿದೆ

Related posts

Leave a Reply