Header Ads
Header Ads
Breaking News

ಪಡುಬಿದ್ರಿ:ಗಣಪತಿ ಶಾಲಾ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

ಪಡುಬಿದ್ರಿಯ ಗಣಪತಿ ಶಾಲೆಯಲ್ಲಿ ಕಲಿತು ಉನ್ನತ ಮಟ್ಟದ ಸಾಧನೆ ಮಾಡಿದ ಹಳೆ ವಿದ್ಯಾರ್ಥಿಗಳು, ಇದೀಗ ತಮ್ಮಂತ್ತೆ ಸಾಧನೆಯ ಹಾದಿಯಲ್ಲಿದ್ದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಶಾಲೆಯ ಋಣವನ್ನು ತೀರಿಸುತ್ತಿರುವ ಆದರ್ಶಪ್ರಾಯ ಹಳೆವಿದ್ಯಾರ್ಥಿಗಳು ದೇಶದ ಬಲುದೊಡ್ಡ ಆಸ್ತಿ ಎಂಬುದಾಗಿ ಪಡುಬಿದ್ರಿ ಗಣಪತಿ ಶಾಲಾ ಮುಖ್ಯ ಶಿಕ್ಷಕ ಗಣಪತಿ ಭಟ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅವರು ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ 46ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಬಾಷಾ ವಿದ್ವಾಂಸ ಕೆ.ಕೆ. ಪೇಜಾವರ, ತುಳು ನಾಡಿನಲ್ಲಿ ನಾವು ಆರಾಧಿಸಿಕೊಂಡ ಬಂದ ದೈವ ದೇವರುಗಳ ಬಗ್ಗೆ ಹಾಗೂ ತುಳುವರ ಆಚಾರ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ಇದೇ ಸಂದರ್ಭ ಮಾತೃ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕ ಎ.ಕೆ. ಮರಿಯಪ್ಪ ಹಾಗೂ ನಿವೃತ್ತ ಶಿಕ್ಷಕಿ ವಿಜಯ ಪ್ರಭಾ ಐ. ಭಟ್ ಇವರುಗಳನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.ಈ ಸಂದರ್ಭ ವೇದಿಕೆಯಲ್ಲಿ ನ್ಯಾಯವಾದಿ ಪ್ರದೀಪ್ ಕುಮಾರ್, ಉದ್ಯಮಿ ಲತಾ ಗಣೇಶ್ ಕಾಮತ್, ಹಳೆವಿದ್ಯಾರ್ಥಿ ಸಂಘದ ನಿರ್ದೇಶಕ ಕೆ. ಅನಂತ ಪಟ್ಟಾಭಿ ರಾವ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸುಮತಿ ಹೆಗಡೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯ-ಸದಸ್ಯೆಯರಿಂದ “ನೃತ್ಯ ಸಿಂಚನ” ಹಾಗೂ ಹರೀಶ್ ಕುಮಾರ್ ಪಡುಬಿದ್ರಿ ವಿರಚಿತ ತುಳು ನಾಟಕ ತೂಪಿನಾರೆ ಆಪಿನಾರ್ ಪ್ರದರ್ಶನಗೊಂಡಿದೆ.

Related posts

Leave a Reply