Header Ads
Header Ads
Breaking News

ಪಡುಬಿದ್ರಿಯಲ್ಲಿ ಅಮುಲ್ ಐಸ್ ಕ್ರೀಂ ಪಾರ್ಲರ್ ಉದ್ಘಾಟನೆ:ಐಸ್‌ಕ್ರೀಂ ಸಹಿತ ವಿವಿಧ ತಿಂಡಿ ತಿನಸುಗಳು,ತಂಪು ಪಾನಿಯಾದ ಮಳಿಗೆ.

ಐಸ್‌ಕ್ರೀಂ ಪ್ರೀಯರಿಗೊಂದು ಸಂತಸದ ಸುದ್ದಿ. ಪಡುಬಿದ್ರಿ ಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ಅಮುಲ್ ಐಸ್‌ಕ್ರೀಂ ಪಾರ್ಲರ್ ಶುಭಾರಂಭಗೊಂಡಿತು. ಐಸ್‌ಕ್ರೀಂ ಸಹಿತ ವಿವಿಧ ತಿಂಡಿ ತಿನಸುಗಳು ಹಾಗೂ ತಂಪು ಪಾನಿಯಗಳು ಈ ಪಾರ್ಲರ್‌ನಲ್ಲಿ ಲಭ್ಯವಿದೆ.ಪಡುಬಿದ್ರಿಯಲ್ಲಿನ ಮಂಗಳೂರು ಕಡೆಗೆ ಹೋಗುವ ಬಸ್ ತಂಗುದಾಣದ ಹಿಂಭಾಗದ ಶಾಂತೇರಿ ಪಲ್ಲವಿ ಕಟ್ಟಡದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ. ಸುಕುಮಾರ್ ರಿಬ್ಬನ್ ಕತ್ತರಿಸುವ ಮೂಲಕ ಐಸ್ ಕ್ರೀಂ ಪಾರ್ಲರ್ ಉದ್ಘಾಟಿಸಿದರು.ಆ ಬಳಿಕ ಮಾತನಾಡಿದ ಅವರು ಪಡುಬಿದ್ರಿ ಜನತೆಗೆ ಈ ದಿನ ಬಹಳ ವಿಶೇಷ ದಿನವಾಗಿದ್ದು, ಪಡುಬಿದ್ರಿಯ ಪುಣ್ಯ ಕ್ಷೇತ್ರವೆಂದೇ ಪ್ರಸಿದ್ಧಿಯಲ್ಲಿರುವ ಬ್ರಹ್ಮಸ್ಥಾನದಲ್ಲಿ ಈ ದಿನ ಮಂಡಲ ಹಾಕುವ ಮೂಲಕ ಸುಮಾರು ಎರಡು ತಿಂಗಳ ಕಾಲ ನಡೆಯುವ ಢಕ್ಕೆ ಬಲಿ ಸೇವೆಗೆ ಮೂಹೂರ್ತ, ಈ ಪುಣ್ಯ ದಿನದಂದ್ದೇ ಜೇಸಿ ಮಿತ್ರ ಮಕರಂದ ದಂಪತಿಗಳ ಮಾಲಕತ್ವದ ಐಸ್ ಕ್ರೀಂ ಪಾರ್ಲರ್ ಉದ್ಘಾಟನೆಗೊಂಡಿದೆ. ಬೆಳೆಯುತ್ತಿರುವ ಪಡುಬಿದ್ರಿ ಪ್ರದೇಶಕ್ಕೆ ಅಗತ್ಯವಾಗಿ ಬೇಕಾಗಿದ್ದ ಈ ಐಸ್ ಕ್ರೀಂ ಪಾರ್ಲರ್ ಯಶಸ್ಸಿನ ಹಾದಿಯಲ್ಲಿ ಸಾಗಲಿದೆ ಎಂದು ಶುಭ ಹಾರೈಸಿದರು.ಐಸ್ ಕ್ರೀಂ ಪಾರ್ಲರ್ ಮಾಲಕ ಮಕರಂದ್ ಮಾತನಾಡಿ, ಮುಂಜಾನೆ 9 ಗಂಟೆಯಿಂದ ರಾತ್ರಿ 11ರ ವರಗೆ ನಿರಂತರ ಗ್ರಾಹಕರ ಸೇವೆಗೆ ಲಭ್ಯವಿದ್ದು, ಇಲ್ಲಿ ಅಮುಲ್ ಕಂಪನಿಯ ಎಲ್ಲಾ ಬಗೆಯ ಐಸ್ ಕ್ರೀಂ ಸಹಿತ ತಂಪು ಪಾನೀಯಗಳು ಹಾಗೂ ವಿವಿಧ ತಿಂಡಿ ತಿನಸುಗಳು ಹಿತ-ಮಿತವಾದ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದರು.ಮುಂಜಾನೆ ಧಾರ್ಮಿಕ ಕಾರ್ಯಗಳೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮಕ್ಕೆ ಸ್ಥಳೀಯ ವಿವಿಧ ಕ್ಷೇತ್ರಗಳ ಮುಖಂಡರು ಆಗಮಿಸಿ ಮಕರಂದ ದಂಪತಿಗಳು ಆರಂಭಿಸಿದ ಉದ್ಯಮಕ್ಕೆ ಶುಭ ಹಾರೈಸಿದರು.

Related posts

Leave a Reply