Breaking News

ಪಡುಬಿದ್ರಿಯಲ್ಲಿ ಕುಡಿಯುವ ನೀರಿನ ಪೋಲು, ಜಿಲ್ಲಾಧಿಕಾರಿ ತಪಾಸಣೆ ಸೂಕ್ತ ಕ್ರಮದ ಭರವಸೆ

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ ಮೈದಾನದ ಬಳಿ ನಿರಂತರ ಕುಡಿಯುವ ನೀರು ಪೋಲಾಗುವ ಹಿನ್ನಲೆಯಲ್ಲಿ ಗುರುವಾರ ಸಂಜೆ ಸ್ಥಳಕ್ಕಾಗಮಿಸಿದ ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಪ್ರಾನ್ಸೀಸ್ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತ ಪಡಿಸಿದ್ದಾರೆ.
ಮಳೆಯ ಅಭಾವದಿಂದ ಇದೀಗ ಪಡುಬಿದ್ರಿ ಜನತೆ ನೀರಿನ ಸಮಸ್ಯೆ ಅನುಭವಿಸುತ್ತಿದ್ದರೂ, ಪಡುಬಿದ್ರಿ ಗ್ರಾಮ ಪಂಚಾಯಿತ್ ನಿರಂತರವಾಗಿ ನೀರನ್ನು ಪೋಲು ಮಾಡುತ್ತಿದ್ದು, ಪಡುಬಿದ್ರಿ ಬೋರ್ಡ್ ಶಾಲಾ ಪಕ್ಕದ ಒವರ್‌ಹೆಡ್ ಟ್ಯಾಂಕಿಗೆ ರಾತ್ರಿ ಎಲ್ಲಾ ನೀರು ಹರಿದು ತುಂಬಿ ತುಳುಕಿ ಪಕ್ಕದ ಶಾಲಾ ಮೈದಾನವಿಡೀ ಕೆಸರುಮಯವಾಗುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಗ್ರಾ. ಪಂ. ಪಿಡಿ‌ಒರವರನ್ನು ದೂರವಾಣಿ ಮೂಲಕ ಎಚ್ಚರಿಸಿದ್ದರು. ಆ ಬಳಿಕದ ಕೆಲವು ದಿನ ನೀರು ಪೋಲಾಗುವುದು ನಿಂತಿದ್ದು ಮತ್ತೆ ಆರಂಭಗೊಂಡಿದೆ.
ಇದೀಗ ನೇರವಾಗಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಸ್ಥಳ ಪರೀಶಿಲನೆ ನಡೆಸಿದ್ದು, ಇದೀಗ ಜಿಲ್ಲೆಯಾಧ್ಯಂತ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿರುವ ಈ ಸಮಯದಲ್ಲಿ ನೀರು ಪೋಲು ಮಾಡುವುದು ಅಪರಾಧ. ಈ ಹಿಂದೆ ನೀಡಿದ ಎಚ್ಚರಿಕೆಯ ಬಳಿಕವೂ ಎಚ್ಚೆತ್ತುಗೊಳ್ಳದ ಗ್ರಾ. ಪಂ. ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ವ್ಯಕ್ತ ಪಡಿಸಿದ್ದಾರೆ. ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ.

Related posts

Leave a Reply