Header Ads
Header Ads
Header Ads
Breaking News

ಪಡುಬಿದ್ರಿಯಲ್ಲಿ “ಗಿರಿಜನ ಉತ್ಸವ-2019”

ಪಡುಬಿದ್ರಿ ಶ್ರೀ ಬ್ರಹ್ಮ ಮುಗ್ಗೇರ್ಕಳ ಸಾಂಸ್ಕøತಿಕ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರ ಇವರ ಸಹಕಾರದೊಂದಿಗೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ ಜಿಲ್ಲೆ ಇವರು ಆಯೋಜಿಸಿದ “ಗಿರಿಜನ ಉತ್ಸವ-2019” ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನ ಕಲ್ಲಟ್ಟೆ ಇದರ ಭವ್ಯ ವೇದಿಕೆಯಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ, ಪಡುಬಿದ್ರಿ ಶ್ರೀ ಬ್ರಹ್ಮ ಮುಗ್ಗೇರ್ಕಳ ಸಾಂಸ್ಕøತಿಕ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರ ಇದರ ಅಧ್ಯಕ್ಷ ಪಿ.ವಿಠ್ಠಲ, ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಅನುದಾನ ಬಳಸಿ ನಡೆಸಿದ, ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನಮ್ಮ ಸಂಸ್ಥೆ ನೀಡಿದೆ, ಮುಂದಿನ ಯುವ ಪೀಳಿಗೆ ಇದನ್ನು ಮುಂದುವರಿಸಿಕೊಂಡು ಕಲೆಯನ್ನು ಉಳಿಸಿದಲ್ಲಿ ನಮ್ಮ ಶ್ರಮ ಸಾರ್ಥಕವೆಂದರು.
ಸಭಾ ಕಾರ್ಯಕ್ರಮ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ತಂಡಗಳಿಂದ, ಸೋಲಿಗರ ಕುಣಿತ, ಮಹಿಳಾ ಕೊರಗರ ಕುಣಿತ, ಡೊಳ್ಳು ಕುಣಿತ, ಹೋಲಿ ಕುಣಿತ, ಕಂಸಾಳೆ, ಕೊರಗರ ಡೋಲು ವಾದನ ಹಾಗೂ ಜಾನಪದ ನೃತ್ಯ, ಸುಗಮ ಸಂಗೀತ, ಸಮೂಹ ನೃತ್ಯ, ಸಿದ್ಧಿ ಕುಣಿತ, ಜಾನಪದ ನೃತ್ಯ, ಯಕ್ಷಗಾನ ಹಾಗೂ ಚೆಂಡೆ ವಾದ್ಯ ಪ್ರದರ್ಶನಗೊಂಡವು.
ಸಭಾಧ್ಯಕ್ಷತೆಯನ್ನು ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ಅಮೀನ್ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ಗ್ರಾ.ಪಂ. ಉಪಾಧ್ಯಕ್ಷ ವೈ. ಸುಕುಮಾರ್, ಇಲಾಖಾ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಗ್ರಾ.ಪಂ. ಸದಸ್ಯರಾದ ಲಕ್ಷ್ಮಣ್ ಕೋಟ್ಯಾನ್, ನಯನ, ಹರಿಣಾಕ್ಷಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *