Header Ads
Header Ads
Breaking News

ಪಡುಬಿದ್ರಿಯಲ್ಲಿ ಗುಲಾಬಿ ಹೂ ನೀಡಿ ಸಂಚಾರ ಜಾಗೃತಿ

ಹೆಲ್ಮೇಟ್ ಕಡ್ಡಾಯ ಸವಾರರ ಪ್ರಾಣ ರಕ್ಷಣೆಗಾಗಿಯೇ ಹೊರತು ಪೊಲೀಸ್ ಇಲಾಖೆಗಲ್ಲ. ಹೆಲ್ಮೇಟ್ ಇಲ್ಲದೆ ಹಲವಾರು ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣ ಕಳಕೊಳ್ಳುತ್ತಿದ್ದಾರೆ. ಒಂದು ವೇಳೆ ಹೆಲ್ಮೇಟ್ ಧರಿಸಿದ್ದರೆ ತಲೆಯೇಟಾಗಿ ಹೊಗುವ ಪ್ರಾಣ ಉಳಿಸಲು ಸಾಧ್ಯ. ಆದ್ದರಿಂದ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೇಟ್ ಉಪಯೋಗಿಸಿ ತಮ್ಮ ಪ್ರಾಣ ಕಾಪಾಡಿ ಎಂದು ಕ.ರ.ವೆ. ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಸಲಹೆ ನೀಡಿದ್ದಾರೆ.

ಪಡುಬಿದ್ರಿ ಪೋಲೀಸ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹೆಲ್ಮೇಟ್ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಪಡುಬಿದ್ರಿ ಪೇಟೆಯಲ್ಲಿ ಹೆಲ್ಮೇಟ್ ಧರಿಸದೇ ವಾಹನ ಚಲಾಯಿಸುವವರಿಗೆ ಗುಲಾಬಿ ಹೂ ಕೊಟ್ಟು ಜಾಗೃತಿ ಮುಡಿಸಿದರು. ಜೊತೆಗೆ ಕಾರು ಚಾಲಕರಿಗೆ ಸೀಟ್ ಬೆಲ್ಟ್ ಧರಿಸಲು ಮನವಿ ಮಾಡಿದರು. ಈ ಸಂದರ್ಭ ಪೊಲೀಸ್ ಎಎಸ್ಸೈ ಜಯಣ್ಣ, ಸಂಘಟನೆಯ ಪ್ರಮುಖರಾದ ಆಸೀಫ್, ಹಸನ್ ಕಂಚಿನಡ್ಕ ಮೊದಲಾದವರಿದ್ದರು.

Related posts

Leave a Reply

Your email address will not be published. Required fields are marked *