Header Ads
Header Ads
Header Ads
Breaking News

ಪಡುಬಿದ್ರಿಯಲ್ಲಿ ಟೈಲರ್ ಎಸೋಸಿಯೇಶನ್‌ನ ಕುಟುಂಬ ಸಹಮಿಲನ ಪಡುಬಿದ್ರಿ-ಕಾಪು-ಕಟಪಾಡಿ-ಶಿರ್ವ ಬೆಳ್ಮಣ್ ವಲಯದ ಇನ್ನೂರಕ್ಕೂ ಅಧಿಕ ಸದಸ್ಯರು ಭಾಗಿ

ಪಡುಬಿದ್ರಿಯಲ್ಲಿ ಕರ್ನಾಟಕ ರಾಜ್ಯ ಟೈಲರ್‍ಸ್ ಎಸೋಸಿಯೇಶನ್ ಇದರ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ, ಐದು ವಲಯಗಳ ಕುಟುಂಬ ಸಹಮಿಲನ ಬಹಳ ಅರ್ಥಪೂರ್ಣ ಪಡುಬಿದ್ರಿ ಸಿರಿ ಗಾರ್ಡ್‌ನ್‌ನಲ್ಲಿ ನಡೆಯಿತು.

ಈ ಅದ್ಧೂರಿ ಕಾರ್ಯಕ್ರವನ್ನು ಪಡುಬಿದ್ರಿಯ ಉದ್ಯಮಿ ಮಿಥುನ್ ಆರ್. ಹೆಗ್ಡೆ ದೀಪ ಬೆಳಗಿಸಿ, ತೆಂಗಿನ ಹೂವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಬಹಳ ಅರ್ಥಪೂರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿರುವುದಕ್ಕೆ ಬಹಳ ಸಂತಸವಾಗಿದೆ. ಸದಾ ಹೊತ್ತು ಕೆಲಸದ ಹೊತ್ತಡದಲ್ಲಿರುವ ದರ್ಜಿಗಳು ಇಂದು ಒಂದೇ ಸೊರಿನಡಿಯಲ್ಲಿ ಕುಟುಂಬವಾಗಿ ಸೇರಿ, ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ, ತಮ್ಮ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಬೆಳಕಿಗೆ ತರುವುದು ಮಾತ್ರವಲ್ಲ, ಅವರ ಮುಂದಿನ ಜೀವನಕ್ಕೆ ಅದು ದಾರಿ ದೀಪವಾಗಲಿದೆ.

ಅದಲ್ಲದೆ ದಿನಕೂಲಿ ಕಾರ್ಮಿಕರಂತೆ ದುಡಿಯುತ್ತಿರುವ ಟೈಲರ್‌ಗಳ ಕುಟುಂಬಗಳ ಭದ್ರತೆಯ ಕಡೆ ಸರ್ಕಾರ ಗಮನ ಹರಿಸುವ ಅನಿರ್ವಾಯತೆ ಇದೆ ಎಂದರು. ಇದೇ ವೇಳೆ ಸಂಸ್ಥೆಗಾಗಿ ದುಡಿದ ಹಿರಿ ತಲೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಟೈಲರ್‌ಗಳಾದ ನಾವೆಲ್ಲರೂ ಒಂದೇ ಕುಟುಂಬ ಎಂಬಂತೆ ಆಟೋಟ ಸ್ಪರ್ಧೆಗಳಿಗೆ ತಾವೇ ತೀರ್ಪುಗಾರರಾಗಿ ತಮಗೆ ತಿಳಿದಂತೆ ತೀರ್ಪು ನೀಡುತ್ತಾ, ತೀರ್ಪುಗಾರರು ನೀಡುವ ತೀರ್ಪಿಗೆ ತಲೆಬಾಗಿ ಸ್ವೀಕರಿಸುವ ಮೂಲಕ ಯಾವುದೇ ಗೊಂದಲಗಳಿಲ್ಲದೆ ಕಾರ್ಯಕ್ರಮ ಸಂಜೆಯ ವರೆಗೂ ಮುಂದುವರಿದು ಯಶಸ್ವಿಯಾಗಿ ಅಂತ್ಯ ಕಂಡಿದೆ. ಈ ಸಂದರ್ಭ ರಾಜಯ, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply