Header Ads
Breaking News

ಪಡುಬಿದ್ರಿಯಲ್ಲಿ ಮತದಾರರ ಜಾಗೃತಿ ಜಾಥ

ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಎಸ್‌ವಿಇಇಪಿ ಸಮಿತಿ ಇವರ ಜಂಟಿ ಸಹಯೋಗದಲ್ಲಿ ಮತದಾರರ ಜಾಗೃತಿ ಅಭಿಯಾನ ಪಡುಬಿದ್ರಿಯಲ್ಲಿ ನಡೆದಿದ್ದು, ಆರಂಭದಲ್ಲಿ ನಡೆದ ಜಾಗೃತಿ ಜಾಥಕ್ಕೆ ಉಪ ನಿರ್ಧೇಶಕರು ಶಿಶು ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಗ್ರೇಸಿ ಗೋಸಲೀಸ್ ಚಾಲನೆ ನೀಡಿದ್ದಾರೆ.

ಆ ಬಳಿಕ ಪಡುಬಿದ್ರಿ ಮೀನು ಮಾರುಕಟ್ಟೆಯ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನ ನಮ್ಮ ಹಕ್ಕು ಯಾವುದೇ ಕಾರಣಕ್ಕೆ ಮತದಾನ ಮಾಡುವುದನ್ನು ತಪ್ಪಿಸುವುದು ಸರಿಯಲ್ಲ, ಸುಭದ್ರ ದೇಶ ನಿರ್ಮಾಣಕ್ಕಾಗಿ ಸೂಕ್ತ ಅಭ್ಯಾರ್ಥಿಗಳಿಗೆ ಮತ ನೀಡುವುದು ನಮ್ಮ ಆಧ್ಯಾ ಕರ್ತವ್ಯ ಎಂದರು. ಇದೇ ಸಂದರ್ಭ ಮತಯಂತ್ರ ಅಧಿಕಾರಿಯಾಗಿ ಆಗಮಿಸಿದ ತೋಟಗಾರಿಕಾ ಇಲಾಖಾ ಅಧಿಕಾರಿ ವಿಧೀಶ್ ಸಾರ್ವಜನಿಕರಿಗೆ ಮತಯಂತ್ರದ ವಿಚಾರಗಳನ್ನು ವಿನಿಮಯ ಮಾಡಿ, ಅದರ ಬಳಕೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಈ ಸಂದರ್ಭ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕನಂದ್, ಅಂಗಣವಾಡಿ ಮೇಲ್ವಿಚಾರಕಿ ಶಕುಂತಲ ಪಡುಬಿದ್ರಿ ಗ್ರಾ.ಪಂ. ಪಿಡಿಓ ಪಂಚಾಕ್ಷರೀ ಸ್ವಾಮಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *