Header Ads
Breaking News

ಪಡುಬಿದ್ರಿಯಲ್ಲಿ ರಾಜ್ಯ ಮಟ್ಟದ ಜೈ ಭೀಮ್ ಟ್ರೋಫಿ-2019 : ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಆಯೋಜನೆ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕ್ರೀಡಾ ಪಟುಗಳಿಗಾಗಿ ನಡೆದ ರಾಜ್ಯ ಮಟ್ಟದ ಜೈ ಭೀಮ್ ಟ್ರೋಫಿ 2019ರ ಉದ್ಘಾಟನಾ ಸಮಾರಂಭ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆಯಿತು. ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್, ಮುಖ್ಯ ವಾಹಿನಿಗೆ ಬರುವಲ್ಲಿ ಪರಿಶಿಷ್ಟ ಪಂಗಡದ ಮಂದಿ ಹಿಂಜರಿಯುತ್ತಿದ್ದು, ಅವರನ್ನು ಮುಖ್ಯ ವಾಹಿನಿಗೆ ತರುವ ಪಡುಬಿದ್ರಿ ದಲಿತ ಸಂಘರ್ಷ ಗ್ರಾಮ ಸಮಿತಿಯ ಪ್ರಯತ್ನ ಶ್ಲಾಘನೀಯ ಎಂದರು. ಈ ಸಂದರ್ಭ ವೇದಿಕೆಯಲ್ಲಿ ಲೋಕೇಶ್ ಕಂಚಿನಡ್ಕ, ಅಬ್ದುಲ್ ರಹೇಮಾನ್, ಶರತ್ ಪಡುಬಿದ್ರಿ, ಭಾಸ್ಕರ್ ಪಡುಬಿದ್ರಿ, ವಸಂತಿ ಶಿವಾನಂದ್ ವಿಮಲ ಅಂಚನ್, ಜಯ ಸಾಲ್ಯಾನ್, ದಿನಕರ್ ಉಚ್ಚಿಲ ಮುಂತಾದವರಿದ್ದರು.

 

Related posts

Leave a Reply

Your email address will not be published. Required fields are marked *