Header Ads
Header Ads
Header Ads
Breaking News

ಪಡುಬಿದ್ರಿಯಲ್ಲಿ ವಲಯ ಮಟ್ಟದ ಖೋಖೋ ಪಂದ್ಯಾಕೂಟ ವಲಯದ 20ಕ್ಕೂ ಅಧಿಕ ಪ್ರೌಢಶಾಲಾ ಬಾಲಕಿಯರ ತಂಡಗಳು ಭಾಗಿ

 

ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆದ ಪಡುಬಿದ್ರಿ ವಲಯಮಟ್ಟದ ಪ್ರೌಢಶಾಲಾ ಬಾಲಕಿಯರ ಖೋ ಖೋ ಪಂದ್ಯಾಕೂಟವನ್ನು ಪಡುಬಿದ್ರಿ ಬೀಡು ರತ್ನಾಕರ್‌ರಾಜ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಮೀನ್, ಕ್ರೀಡೆಯೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಂಡು ಗುರು ಹಿರಿಯರ ಆರ್ಶೀವಾದದೊಂದಿಗೆ ಕ್ರೀಡೆಯಲ್ಲಿ ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಕ್ರೀಡಾ ಬದುಕು ಬೆಳಗುವಂತ್ತಾಗಲೆಂದು ಹಾರೈಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಮಾತನಾಡಿ, ಶಿಕ್ಷಣ ಇಲಾಖಾ ಮಟ್ಟದಲ್ಲಿ ಎಲ್ಲಾ ಬಗೆಯ ಗುಂಪು ಆಟಗಳು ಮತ್ತು ವೈಯಕ್ತಿಕ ಆಟಗಳು ನಡೆಯುತ್ತಿದ್ದು, ಆದರೆ ವಿದ್ಯಾರ್ಥಿಗಳು ಒಂದೇ ಆಟವನ್ನು ಆಯ್ಕೆ ಮಾಡಿಕೊಂಡು ಉತ್ತಮವಾಗಿ ಅಭ್ಯಾಸ ನಡೆಸಿದರೆ, ಉನ್ನತಮಟ್ಟದ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವೈ.ಸುಕುಮಾರ್ ವಹಿಸಿದ್ದು, ಮುಖ್ಯ ಅಥಿತಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕ ಮಧುಕರ್, ರಮೇಶ್ ದೇವಾಡಿಗ, ಪ್ರಕಾಶ್ ಶೆಟ್ಟಿ, ರವಿರಾಜ್, ಬುಡಾನ್ ಸಹೇಬ್ ಮುಂತಾದವರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply