Header Ads
Header Ads
Breaking News

ಪಡುಬಿದ್ರಿಯ ಸುಂದರ ಕಡಲ ತೀರದಲ್ಲಿ ವರ್ಣ ವಿಹಾರ 2019

ಪಡುಬಿದ್ರಿಯ ಸುಂದರ ಕಡಲ ಕಿನಾರೆಯಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ವಿವಿಧ ಸಂಸ್ಥೆಗಳ ನೆರವಿನಿಂದ ಆಯೋಜಿಸಿದ ಮೂರನೇ ವರ್ಷದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ, ಸುತ್ತಲ ೨೫ ಶಾಲೆಗಳಿಂದ ನೂರೈವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ವರ್ಣಮಯ ಚಿತ್ರ ಬಿಡಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರ್‍ಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರೋಟರಿ ಸಂಸ್ಥೆಯ ಹಿರಿಯರಾದ ಮಾಧವ ಸುವರ್ಣ ಎರ್ಮಾಳು, ನಮ್ಮ ಸಂಸ್ಥೆಯೊಂದಿಗೆ ಸಾಯಿರಾಧ ಹೆರಿಟೇಜ್ ಮತ್ತು ಅಭಿಕ್ಷ ಗ್ರಾಫಿಕ್ಸ್ ಕೈಜೋಡಿಸಿದ ಈ “ವರ್ಣ ವಿಹಾರ ೨೦೧೯” ಮೂರನೇ ವರ್ಷದಲ್ಲಿ ಈ ಕಾರ್ಯಾಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದ ಮೂಲ ಉದ್ಧೇಶ ಎಲೆ ಮರೆಯ ಕಾಯಿಯಂತ್ತಿರುವ ಮಕ್ಕಳ ಪ್ರತಿಭೆಗಳನ್ನು ಈ ಮೂಲಕ ಹೊರ ತಂದು ಸಮಾಜಕ್ಕೆ ಪರಿಚಯಿಸುವುದೇ ಆಗಿದೆ. ಅದಕ್ಕೆ ಪೂರಕವಾಗಿ ಪ್ರತೀ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದ್ದು ಕಾರ್ಯಕ್ರಮ ಆಯೋಜಿಸಲು ನಮಗೆ ಉತ್ತೇಜನ ನೀಡಿದಂತ್ತಾಗುತ್ತಿದೆ. ಈ ಚಿತ್ರ ಬಿಡಿಸುವ ಸ್ಪರ್ಧೆಯು ಮೂರು ವಿಭಾಗದಲ್ಲಿ ನಡೆಯುತ್ತಿದ್ದು, ಪ್ರತೀ ವಿಭಾಗಕ್ಕೂ ವಿವಿಧ ಚಿತ್ರಗಳನ್ನು ನಿಗದಿ ಪಡಿಸಿದ ಸಮಯದಲ್ಲಿ ಬಿಡಿಸುವ ಅವಕಾಶವಿದ್ದು ಮಕ್ಕಳನ್ನು ಅವರ ಹೆತ್ತವರು ಬಹಳ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತೆ ಉತ್ತೇಜಿಸುತ್ತಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭ ರೋಟರಿ ಪ್ರಮುಖರಾದ ಸುಧಾಕರ್, ಅಶ್ರಫ್, ಲೋಹಿತಾಕ್ಷ ಸುವರ್ಣ, ವೆಂಕಟೇಶ್, ರಿಯಾಝ್ ನಜೀರ್ ಮುಂತಾದವರಿದ್ದರು.

 

 

ವರದಿ-ಸುರೇಶ್ ಎರ್ಮಾಳ್

Related posts

Leave a Reply

Your email address will not be published. Required fields are marked *