Header Ads
Header Ads
Breaking News

ಪಡುಬಿದ್ರಿ ಅಮ್ಮ ತಂಡಕ್ಕೆ ಯುನೈಟೆಡ್ ಟ್ರೋಪಿ- 2019

ಪಡುಬಿದ್ರಿಯ ಹೆಮ್ಮೆಯ ಕ್ರಿಕೆಟ್ ಸಂಸ್ಥೆ ಮೀರಾ ಕ್ರಿಕೇಟರ್‍ಸ್ ಆಶ್ರಯದಲ್ಲಿ ಎರಡು ದಿನಗಳ ಕಾಲ ಪಡುಬಿದ್ರಿ ಹಾಗೂ ಸುತ್ತಲ ಗ್ರಾಮಗಳ ಕ್ರಿಕೆಟ್ ಆಟಗಾರರನ್ನು ಸೇರಿಕೊಂಡು ಐಪಿಎಲ್ ಮಾದರಿಯಲ್ಲಿ ನಡೆದ ಈ ಪಂದ್ಯಾಕೂಟದಲ್ಲಿ ಅಂತಿಮವಾಗಿ ಎರ್ಮಾಳಿನ ಸಮರ್ಥ್ ತಂಡವನ್ನು ಸೋಲಿಸುವ ಮೂಲಕ ಪಡುಬಿದ್ರಿ ಅಮ್ಮ ಕ್ರಿಕೆಟ್ ತಂಡ ನಗದು ಹಾಗೂ ಬೃಹತ್ ಯುನೈಟೆಡ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿದ್ದು ಸಮರ್ಥ್ ದ್ವಿತಿಯ ನಗದಿನೊಂದಿಗೆ ಟ್ರೋಪಿಯನ್ನು ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಉದ್ಯಮಿ ನವೀನ್‌ಚಂದ್ರ ಜೆ. ಶೆಟ್ಟಿ, ಕ್ರಿಕೆಟ್ ಎಂಬುದು ಒಂದು ಆಟವಾಗಿದ್ದರೂ ಇದೊಂದು ಸರ್ವ ಧರ್ಮ ಸಮ್ಮಿನ, ಯಾವುದೇ ಜಾತಿ-ಮತ-ವಯಸ್ಸಿನ ಅಂತರವನ್ನು ಲೆಕ್ಕಿಸದೆ ಆಡುವ ಆಟವಾಗಿದೆ, ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಇದೇ ಸಂದರ್ಭ ಕುಂದಾಪುರ ಮೂಲಕ ಟೆನ್ನಿಸ್ ಬಾಲ್ ಕ್ರಿಕೆಟಿಗ ಗೌತಮ್ ಶೆಟ್ಟಿಯವರನ್ನು ಸಂಸ್ಥೆಯ ಮೂಲಕ ಸನ್ಮಾನಿಸಲಾಯಿತು, ಸಮಾರೋಪ ಸಮಾರಂಭದಲ್ಲಿ ಅಥಿತಿಗಳಾಗಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶರತ್ ಶೆಟ್ಟಿ ಪಡುಬಿದ್ರಿ, ಸುಕೇಶ್ ಎರ್ಮಾಳು, ರೋಹಿತಾಕ್ಷ ಪಡುಬಿದ್ರಿ, ಅರವಿಂದ್ ಪಡುಬಿದ್ರಿ ಶರತ್ ಆಚಾರ್ಯ, ಸಂಘಟಕರಾದ ಅಪ್ಪು ಬದಿಯಡ್ಕ ಹಾಗೂ ಸೌಜನ್ ಪಡುಬಿದ್ರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *