Header Ads
Breaking News

ಪಡುಬಿದ್ರಿ ಕಾಡಿಪಟ್ಣ ರಸ್ತೆಯಲ್ಲಿ ವಾಮಾಚಾರದ ಶಂಕೆ

ವಿವಿಧ ಕುಕೃತ್ಯಗಳಿಗೆ ಹೆಸರುವಾಸಿಯಾದ ಕಾಡಿಪಟ್ಣ ರಸ್ತೆ ಇದೀಗ ವಾಮಾಚಾರ ಕುರುಹುಗಳು ರಸ್ತೆಯಲ್ಲಿ ಪತ್ತೆಯಾಗುವ ಮೂಲಕ ಮತ್ತೆ ಸುದ್ಧಿಯಲ್ಲಿದ್ದು, ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತ ಪಡಿಸುತ್ತಾರೆ.

ಕಳೆದ ಕೆಲವು ತಿಂಗಳ ಹಿಂದಿನಿಂದಲೂ ಸಂಜೆಯಾಗುತ್ತಿದಂತೆ ಕಾಡಿಪಟ್ಣ ರಸ್ತೆ ಪಕ್ಕದ ಹಾಡಿ ಪ್ರದೇಶದ ಬಳಿ, ಮಹಿಳೆಯರು, ಯುವತಿಯರು ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಅವರ ಪಕ್ಕಕ್ಕೆ ಕಲ್ಲು ಬೀಸಾಡುವ ತಂಡವೊಂದು ಸಕ್ರಿಯವಾಗಿದ್ದು, ಆ ವಿಕೃತಿಗಳ ಪತ್ತೆಗೆ ಸ್ಥಳೀಯ ಯುವಕರ ತಂಡವೊಂದು ಬಹಳಷ್ಟು ದಿನಗಳು ರಾತ್ರಿ ಹೊತ್ತು ತಂಡ ತಂಡವಾಗಿ ಕಾದು ಕುಳಿತರು ಪತ್ತೆ ಕಾರ್ಯ ಅಸಾಧ್ಯವಾಗಿದೆ. ಆ ಕೃತ್ಯ ಈಗಲೂ ಮುಂದುವರಿದಿದೆ. ಈ ಪ್ರಕರಣ ಚಾಲ್ತಿಯಲ್ಲಿರುವಂತ್ತೆ ಮತ್ತೊಂದು ಸಮಸ್ಯೆ ಈ ಭಾಗದ ಜನರನ್ನು ಕಾಡ ತೊಡಗಿದೆ, ಪ್ರತಿನಿತ್ಯ ಈ ರಸ್ತೆಯಲ್ಲಿ ವಾಮಾಚಾರದ ಕುರುಹುಗಳು ಕಾಣ ಸಿಗುತ್ತಿದ್ದು ಸ್ಥಳೀಯರು ಮಕ್ಕಳನ್ನು ಶಾಲೆಗೆ ಆ ಮಾರ್ಗವಾಗಿ ಕಳುಹಿಸಲು ಹೆದರುತ್ತಿದ್ದಾರೆ, ಅನ್ನ, ಮೊಟ್ಟೆ, ಲಿಂಬೆ ಹಣ್ಣು, ತೆಂಗಿನ ಕಾಯಿ, ಮೊದಲಾದವುಗಳು ನಿರಂತರವಾಗಿ ನಾಲ್ಕು ರಸ್ತೆ ಕೂಡುವ ಪ್ರದೇಶದಲ್ಲಿ ಕಾಣ ಸಿಗುತ್ತಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *