Header Ads
Header Ads
Header Ads
Breaking News

ಪಡುಬಿದ್ರಿ ಗ್ರಾಮಸಭೆಯಲ್ಲಿ ಎರಡು ತಂಡಗಳ ಜಟಾಪಟಿ

ಜಟಿಲ ಎರಡು ಸಮಸ್ಯೆಗಳಾದ ಬಾರ್ ಹಾಗೂ ಗ್ಯಾಸ್ ಗೊಡಾನ್ ತೆರವು ವಿಚಾರದಲ್ಲಿ ಎರಡು ತಂಡಗಳ “ಭಿನ್ನ” ಅಭಿಪ್ರಾಯದಿಂದಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿಕೊಂಡಿದಲ್ಲದೆ ಹಲ್ಲೆಗೆ ಮುಂದಾಗುವ ಮಟ್ಟಿಗೆ ಹೋಗಿ, ಅಂತಿಮವಾಗಿ ಏಕಪಕ್ಷೀಯವಾಗಿ ನಿರ್ಧಾರಗಳು ಮಂಡನೆಯಾಗುವ ಮೂಲಕ ಸಭೆ ಅಂತ್ಯಗೊಂಡಿದೆ.

ಕಳೆದ ಸುಮಾರು ಮೂರು ತಿಂಗಳ ಹಿಂದೆ ನಡೆದ ಗ್ರಾಮಸಭೆಯಲ್ಲಿ, ಸರ್ಕಾರಿ ಶಾಲಾ ಕಾಲೇಜು ಪಕ್ಕದಲ್ಲಿ ಆರಂಭಗೊಂಡ ಬಾರ್ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದಾಗ ಗದ್ದಲ ನಡೆದು ಸಭೆ ಮುಟುಕುಗೊಳಿಸಲಾಗಿತ್ತು. ಅದರ ಮುಂದುವರಿದ ಗ್ರಾಮಸಭೆ ಬುಧವಾರ ಬಿಲ್ಲವರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬಾರ್ ವಿಚಾರವಾಗಿ ಮತ್ತೆ ಗೊಂದಲ ನಡೆಯುವ ಎಲ್ಲಾ ಸಾಧ್ಯತೆಗಳು ಇತ್ತು, ಜನರು ಅದನ್ನೇ ನಿರೀಕ್ಷೆ ಮಾಡಿದ್ದರು ಕೂಡಾ. ಆದರೆ ಸಭೆ ಆರಂಭಗೊಳ್ಳುತ್ತಿದ್ದಂತೆ ಬಾರ್ ವಿರೋಧಿ ಗುಂಪಿಗೆ ಪರ್ಯಾಯವಾಗಿ ಮತ್ತೊಂದು ಗುಂಪು ಸಿದ್ಧವಾಗುವ ಮೂಲಕ, ಎರಡೂ ತಂಡಗಳ ಮಧ್ಯೆ ಜಟಾಪಟಿ ಆರಂಭಗೊಂಡಿದೆ. ಅದರ ಮಧ್ಯೆ ಪಾದೆಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಸ್ ಶೇಖರಣಾ ಘಟಕ ತೆರವುಗೊಳಿಸಲು ಒಂದು ತಂಡ ಆಗ್ರಹಿಸಿದ್ದು, ಮತ್ತೊಂದು ತಂಡ ಅದನ್ನು ವಿರೋಧಿಸಿದೆ. ನಾಜೂಕಾಗಿ ಪರಿಹಾರ ಮಾಡಬೇಕಾಗಿದ್ದ ಸಮಸ್ಯೆಯನ್ನು ಜಟಿಲವಾಗಿಸಿರುವುದು ಗ್ರಾ.ಪಂ. ಉಪಾಧ್ಯಕ್ಷರು ಎಂಬ ಆರೋಪ ಗ್ರಾಮಸ್ಥರದ್ದು. ಒಂದು ಕಾಲೋನಿಯ ಸಮಸ್ಯೆಯನ್ನು ಅದೇ ಕಾಲೋನಿ ಜನರ ಅಭಿಪ್ರಾಯ ಕೇಳಿ ನಿರ್ಧರಿಸಬೇಕಾಗಿದ್ದರೂ, ಅಧಿಕಾರ ದುರುಪಯೋಗ ಪಡಿಸಿಕೊಂಡ ಅವರು ಇಡೀ ಗ್ರಾಮದ ಜನರ ಅಭಿಪ್ರಾಯವನ್ನು ಕೇಳಿ ಗ್ಯಾಸ್ ಶೇಖರಣಾ ಘಟಕಕ್ಕೆ ಬೆಂಬಲ ವ್ಯಕ್ತ ಪಡಿಸುವ ಮೂಲಕ, ಸಭೆಯ ನಿರ್ಧಾರ ಏಕಪಕ್ಷೀಯವಾಗಿ ನಡೆಯುವಂತ್ತಾಯಿತು ಎಂಬ ಆರೋಪ ಗ್ರಾಮಸ್ಥರದ್ದು.


ವಿ.ಎ. ವಿರುದ್ಧ ಲಂಚದ ಆರೋಪ: ಪಡುಬಿದ್ರಿ ವಿ.ಎ. ಶ್ಯಾಮಸುಂದರ್, ಯಾವುದೇ ಕೆಲಸ ಆಗ ಬೇಕಿದ್ದರೆ ಲಂಚ ಕೇಳುತ್ತಾರೆ, ಅವರು ಕೇಳಿದಷ್ಟು ನೀಡದಿದ್ದರೆ ವಿನಾ ಕಾರಣ ನಮ್ಮನ್ನು ಅಲೆದಾಡಿಸುತ್ತಾರೆ ಎಂಬುದಾಗಿ, ವಿ.ಎ. ವೇದಿಕೆಯಲ್ಲಿ ಮಾಹಿತಿ ನೀಡುತ್ತಿದಂತೆ ಆರೋಪಿಸಿದಾಗ ಅವರ ಮುಖ ಇಂಗುತಿಂದ ಮಂಗನಂತ್ತಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ಹಾಜರಿದ್ದ ನೋಡಲ್ ಅಧಿಕಾರಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ವೈದ್ಯಾಧಿಕಾರಿ ತರಾಟೆ: ಹುಚ್ಚು ನಾಯಿ ಕಡಿತಕ್ಕೂಳಗಾದ ಮಹಿಳೆಯೋರ್ವರು ಚಿಕಿತ್ಸೆಗಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಬಿ.ಬಿ.ರಾವ್ ಎಂಬವರಲ್ಲಿಗೆ ಬಂದಾಗ, ಕೇವಲ ಮದ್ದು ನೀಡಿ ನಾಳೆ ಬಂದು ಚುಚ್ಚುಮದ್ದು ಪಡೆಯಿರಿ ಎಂಬುದಾಗಿ ನಿರ್ಲಕ್ಷ್ಯ ತೋರಿಸಿದ್ದಾರೆ ಎಂಬುದಾಗಿ ಆರೋಪಿದ ಗ್ರಾಮಸ್ಥರು, ಅವರ ಪ್ರಾಣಕ್ಕೇನಾದರೂ ಅಪಾಯ ಸಂಭವಿಸಿದ್ರೆ ಯಾರು ಹೊಣೆ ಎಂಬುದಾಗಿ ವೈದ್ಯರನ್ನು ತರಾಟೆಗೆ ತೆದುಕೊಂಡರು. ತಾನು ಮಾಡಿದ ಕರ್ತವ್ಯ ಲೋಪವನ್ನು ಸಮರ್ಥಿಸಿದ ವೈಧ್ಯಾಧಿಕಾರಿ ಹುಚ್ಚುನಾಯಿ ಕಚ್ಚಿದ ಒಂದು ದಿನದ ಬಳಿಕ ಚುಚ್ಚು ಮದ್ದು ಪಡೆಯ ಬಹುದು ಎಂಬುದಾಗಿ ಹೇಳುತ್ತಿದಂತೆ ಗ್ರಾಮಸ್ಥರು ಆಕ್ರೋಶಿತರಾದಾಗ ವೈದ್ಯರ ಬಾಯಿಕಟ್ಟಿಹೋಗಿದೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply