Header Ads
Header Ads
Breaking News

ಪಡುಬಿದ್ರಿ ಗ್ರಾ.ಪಂ.ನಿಂದ ಅಂಗಡಿಗಳಿಗೆ ದಾಳಿ : ಕ್ವಿಂಟಲ್ ಗಟ್ಟಲೆ ನಿಷೇಧಿತ ಪ್ಲಾಸ್ಟಿಕ್ ಕೈಚೀಲಗಳು ವಶಕ್ಕೆ

ಪಡುಬಿದ್ರಿ ಗ್ರಾಮ ಪಂಚಾಯಿತಿ ಪ್ಲಾಸ್ಟಿಕ್ ಚೀಲಗಳ ನಿಷೇಧದ ಬಗ್ಗೆ ಎಚ್ಚರಿಕೆಯ ನೋಟಿಸು ನೀಡಿದ್ದರೂ, ಕ್ಯಾರೇ ಅನ್ನದೆ ರಾಜರೋಷವಾಗಿ ಗ್ರಾ.ಪಂ. ಬಾಡಿಗೆ ಕೋಣೆಗಳಲ್ಲೇ ಮಾರಾಟ ನಡೆಸುತ್ತಿದ್ದ ಸಹಿತ ಇತರೇ ಅಂಗಡಿಗಳಿಂದ ಕ್ವಿಂಟಲ್ ಗಟ್ಟಲೆ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ಅಭಿವೃದ್ಧಿ ಅಧಿಕಾರಿ ತಂಡ ವಶಪಡಿಸಿಕೊಂಡಿದೆ.

ಗ್ರಾ.ಪಂ. ಪಂಚಾಯತಿಯಿಂದ ಬಾಡಿಗೆಗೆ ಪಡೆದ ಅಂಗಡಿ ಕೋಣೆಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ರಾಶಿ ಹಾಕಿ ಮಾರಾಟ ನಡೆಸುತ್ತಿದ್ದು, ದಾಳಿ ನಡೆಸಿದ ವೇಳೆ ಪಿಡಿಓರವರೊಂದಿಗೆ ವಾಗ್ವಾದಕ್ಕಿಳಿದು ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸುವುದಕ್ಕೆ ಅವಕಾಶ ನೀಡದ ಸಂದರ್ಭ ಅಂಗಡಿಕೋಣೆಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭ ಅಂಗಡಿ ಮಾಲಿಕ ಎರಡು ಗೋಣಿ ಚೀಲ ಪ್ಲಾಸ್ಟಿಕ್ ಚೀಲವನ್ನು ಗ್ರಾ.ಪಂ.ಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರೀ ಸ್ವಾಮಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ಎಲ್ಲಾ ಅಂಗಡಿ ಮುಗ್ಗಟ್ಟುಗಳಿಗೂ ಪ್ಲಾಸ್ಟಿಕ್ ಮಾರಾಟ ನಡೆಸದೆ ನಿಷೇಧಿಸುವಂತ್ತೆ, ಮಾರಾಟ ಇಲ್ಲವೆ ಉಪಯೋಗಿಸಿದರೆ ದಂಡ ಸಹಿತ ಕ್ರಿಮಿನಲ್ ಮೊಕ್ಕದಮೆ ದಾಖಲಿಸುವುದಾಗಿ ಎಚ್ಚರಿಕೆಯ ನೋಟಿಸು ನೀಡಿತ್ತು. ಆದ್ರೂ ನೋಟಿಸಿಗೆ ಮಾನ್ಯತೆ ನೀಡದೆ, ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ನಡೆಸುತ್ತಿದ್ದ ನಮ್ಮ ಗ್ರಾ.ಪಂ. ಕಟ್ಟಡದಲ್ಲಿ ಬಾಡಿಗೆಗೆ ಇರುವ ಎರಡು ಅಂಗಡಿಗಳಿಂದ ಸುಮಾರು ಒಂದು ಕ್ವಿಂಟಲ್ ಪ್ಲಾಸ್ಟಿಕ್ ಚೀಲಗಳನ್ನು ವಶ ಪಡಿಸಿಕೊಳ್ಳಲಾಗಿದೆ, ಉಳಿದಂತೆ ಬಹಳಷ್ಟು ಅಂಗಡಿಗಳಿಂದ ಪ್ಲಾಸ್ಟಿಕ್ ಚೀಲಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದ್ರು.

Related posts

Leave a Reply

Your email address will not be published. Required fields are marked *