Header Ads
Breaking News

ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಗರಿಗೆದರಿದ ಕಳ್ಳರ ಹಾವಳಿ : ಮನೆ-ದೈವ ಸ್ಥಾನಗಳಲ್ಲಿ ನಗ ನಗದು ಕಳವು

ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೇಂಗ್ರೆ ಎಂಬಲ್ಲಿ ಕಳೆದ ರಾತ್ರಿ ಮನೆ ಹಾಗೂ ದೈವಸ್ಥಾನದ ಬಾಗಿಲ ಚಿಲಕ ಮುರಿದು ಬೆಳ್ಳಿ-ಬಂಗಾರದ ಆಭರಣ ಹಾಗೂ ನಗದು ಕಳವು ನಡೆದ ಬಗ್ಗೆ ವರದಿಯಾಗಿದೆ.ಅನಾರೋಗ್ಯ ಪೀಡಿತರಾದ ಶಂಶಾದ್ ಎಂಬರು ಮನೆಗೆ ಬೀಗ ಹಾಕಿ ತಮ್ಮ ಸಂಬಂಧಿಗಳ ಮನೆಗೆ ಹೋಗಿದ್ದು, ಈ ಸಂದರ್ಭವನ್ನು ಊಪಯೋಗಿಸಿಕೊಂಡ ಕಳ್ಳರು ಅವರು ಚಿಕಿತ್ಸೆಗಾಗಿ ಬೆಡ್ ಅಡಿಯಲ್ಲಿ ಇರಿಸಿದ ಹನ್ನೆರಡು ಸಾವಿರ ರೂಪಾಯಿ ಹಾಗೂ ಕಪಾಟಿನಲ್ಲಿದ್ದ ಎರಡು ಚಿನ್ನದ ಉಂಗುರ ಕಳವು ಗೈದಿದ್ದಾರೆ.
ಈ ಕೃತ್ಯ ಶಂಶಾದ್ ಮುಂಜಾನೆ ಮನೆಗೆ ಬಂದಾಗ ಬೆಳಕಿಗೆ ಬಂದಿದೆ. ಅದೇ ರೀತಿ ಈ ಮನೆಯ ಪಕ್ಕದ ಜಗದೀಶ್ ಭಂಡಾರಿ ಎಂಬವರ ಅಂಗಳದಲ್ಲೇ ಇರುವ ಎರಡು ದೈವಸ್ಥಾನಗಳ ಬಾಗಿಲ ಚಿಲಕ ಮುರಿದ ಕಳ್ಳರು ಬೆಳ್ಳಿಯ ನಾಲ್ಕು ಆಯುಧ ಬೆಳ್ಳಿ ಮೂರ್ತಿ, 12 ಗ್ರಾಂ. ತೂಕದ ಚಿನ್ನದ ಆಭರಣ ಕಳವು ನಡೆಸಿದ್ದಾರೆ ಎಂಬುದಾಗಿ ಜಗದೀಶ್ ಭಂಡಾರಿ ತಿಳಿಸಿದ್ದಾರೆ. ಮತ್ತೆ ಕಳ್ಳರ ಹಾವಳಿ ಆರಂಭವಾಗುವ ಮೂಲಕ ಜನರಲ್ಲಿ ಆತಂಕ ಮನೆ ಮಾಡಿದೆ, ನಿರಂತರವಾಗಿ ವಿವಿಧ ತಂಡಗಳಾಗಿ ಪೊಲೀಸರು  ಕಾರ್ಯಚರಿಸುತ್ತಿದ್ದರೂ ಇಂಥ ಕಳವು ಪ್ರಕರಣಗಳು ನಡೆಯುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದೀಗ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *