Header Ads
Breaking News

ಪಡುಬಿದ್ರಿ ಠಾಣೆಯಲ್ಲಿ ಆಟೋ ಚಾಲಕರಿಗೆ ಎಸ್ಸೈ ಪಾಠ

ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಆಟೋ ರಿಕ್ಷಾ ನಿಲ್ದಾಣಗಳ ಚಾಲಕರನ್ನು ಠಾಣೆಗೆ ಕರೆಯಿಸಿ ಸಂಚಾರ ನಿಯಮಗಳ ಬಗ್ಗೆ ಪಾಠ ಮಾಡಿದ ಪಡುಬಿದ್ರಿ ಠಾಣಾ ಪಿಎಸ್ಸೈ ಸುಬ್ಬಣ್ಣ, ಆಟೋ ರಿಕ್ಷಾ ಚಾಲಕರು ನಿಯಮ ಉಲ್ಲಂಘನೆ ನಡೆಸದೆ, ಸಮವಸ್ತ್ರದೊಂದಿಗೆ ಸಮಾಜೋಮುಖಿಯಾಗಿ ಕರ್ತವ್ಯ ನಿರ್ವಾಹಿಸುವ ಮೂಲಕ ಇತರರಿಗೆ ಮಾದರಿಯಾಗುವಂತೆ ಕಿವಿ ಮಾತು ಹೇಳಿದ್ದಾರೆ.

ಪ್ರಮುಖವಾಗಿ ಶಾಲಾ ಮಕ್ಕಳನ್ನು ಸಾಗಿಸುವ ಆಟೋ ರಿಕ್ಷಾಗಳು ಬೇಕಾಬಿಟ್ಟಿ ತುಂಬಿಸಿಕೊಂಡು ಹೋಗುವ ಬಗ್ಗೆ ಸಾರ್ವಜನಿಕವಾಗಿ ಬಹಳಷ್ಟು ದೂರುಗಳು ಬಂದಿದ್ದು, ಈ ಬಗ್ಗೆ ಜಿಲ್ಲಾ ಎಸ್ಪಿಯವರ ಸ್ಪಷ್ಟ ಆದೇಶವೂ ಇದ್ದು ಅಂಥಹ ಆಟೋ ರಿಕ್ಷಾಗಳನ್ನು ಯಾವುದೇ ಮೂಲಾಜಿ ಇಲ್ಲದೆ ಸೀಜ್ ಮಾಡಲಾಗುವುದು ಅದಕ್ಕೆ ಅವಕಾಶ ನೀಡದಂತ್ತೆ ಎಚ್ಚರಿಸಿದರು. ಸಂಚಾರ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಜನರ ಹಿತದೃಷ್ಠಿಯಿಂದ ಪಡುಬಿದ್ರಿ ಪೇಟೆಯಲ್ಲಿರುವ ಉಡುಪಿ ಕಡೆಗೆ ಹೋಗುವ ಬಸ್‌ಗಳನ್ನು ಕೊಂಚ ಮುಂದೆ ಹೋಗಿ ನಿಲ್ಲಿಸುವಂತೆ ಬದಲಾವಣೆ ಮಾಡಲಾಗುವುದೆಂದರು. ಇದೇ ರೀತಿ ಮುಂದಿನ ದಿನದಲ್ಲಿ ಶಾಲಾ ವಾಹನಗಳ ಚಾಲಕರು ಹಾಗೂ ಶಾಲಾಢಳಿತ ಮಂಡಳಿಯ ಸಭೆಯನ್ನು ಠಾಣೆಯಲ್ಲಿ ಕರೆದು ಅವರಿಗೂ ಸೂಕ್ತ ಮಾರ್ಗದರ್ಶನ ನೀಡಲಾಗುವುದೆಂದರು.

Related posts

Leave a Reply

Your email address will not be published. Required fields are marked *