Header Ads
Header Ads
Breaking News

ಪಡುಬಿದ್ರಿ ಠಾಣೆಯಲ್ಲಿ ಆಯುಧ ಪೂಜಾ ಸಂಭ್ರಮ

ಪಡುಬಿದ್ರಿಯ ಪೊಲೀಸ್ ಠಾಣೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ನವರಾತ್ರಿಯ ಸಂದರ್ಭ ನಡೆಯುವ ಆಯುಧ ಪೂಜಾ ಧಾರ್ಮಿಕ ಕಾರ್ಯಕ್ರಮವು ಎರ್ಮಾಳು ಗುರುರಾಜ್ ಭಟ್ ನೇತೃತ್ವದಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯಿತು.ಈ ಸಂದರ್ಭ ಮಾತನಾಡಿದ ಪಡುಬಿದ್ರಿ ಠಾಣಾ ಪಿಎಸ್ಸೈ ಸತೀಶ್, ಪ್ರತಿವರ್ಷದಂತೆ ಮೇಲಾಧಿಕಾರಿಗಳು ಸಹಿತ ಗ್ರಾಮಸ್ಥರ ಸಹಕಾರದಿಂದ ಆಯುಧ ಪೂಜಾ ಕಾರ್ಯಕ್ರಮ ಬಹಳ ವಿಜ್ರಂಬಣೆಯಿಂದ ನಡೆದಿದೆ.

ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯೆ ಇರುವ ಉತ್ತಮ ಭಾಂಧವ್ಯ ಈ ಆಯುಧ ಪೂಜಾ ಕಾರ್ಯಕ್ರಮದ ಮೂಲಕ ಮತ್ತೋಮ್ಮೆ ದೃಢಪಟ್ಟಿದೆ. ಪೊಲೀಸ್ ಠಾಣೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯಿಂದಾಗಿ ಅತೀ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ, ಆಯುಧ ಪೂಜೆಯಲ್ಲದೆ ವಾಹನಗಳ ಪೂಜೆಯೂ ನಡೆದಿದೆ.ಸಮಸ್ತ ನಾಗರಿಕರಿಗೆ ಆಯುಧ ಪೂಜೆ ಸಹಿತ ವಿಜಯ ದಶಮಿ ಹಬ್ಬದ ಶುಭಾಶಯ ತಿಳಿಸಿದರು.ಪ್ರಮುಖವಾಗಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಸ್ಥಳೀಯ ಗಣ್ಯರಾದ ನವೀನ್‌ಚಂದ್ರ ಶೆಟ್ಟಿ, ಸದಾನಂದ ಪೂಜಾರಿ, ಪ್ರಕಾಶ್ ಶೆಟ್ಟಿ, ಸಂತೋಷ್ ಶೆಟ್ಟಿ, ನವೀನ್ ಶೆಟ್ಟಿ ಮುಂತಾದವರಿದ್ದರು.

Related posts

Leave a Reply