Header Ads
Header Ads
Breaking News

ಪಡುಬಿದ್ರಿ :ತಂದೆ ಮಗಳಿಂದ ಮುಲ್ಕಿ ಅಟೋ ಚಾಲಕನ ಕೊಲೆ..!

ಯಾವುದೋ ಕಾರಣಕ್ಕೆ ತಂದೆ ಮಗಳಿಬ್ಬರು ವ್ಯಕ್ತಿಯೋರ್ವರಿಗೆ ಫೋನ್ ಮಾಡಿ ಕರೆಯಿಸಿ, ಪಡುಬಿದ್ರಿ ಬಸ್ ತಂಗುದಾಣದಲ್ಲಿ ತಂದೆ ಮಗಳಿಬ್ಬರು ಸಾರ್ವಜನಿಕರ ಮುಂಭಾಗದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಕುಸಿದುಬಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿದ್ದಾರೆ.ಮೃತ ವ್ಯಕ್ತಿ ಮುಲ್ಕಿ ಗಜನಿ ನಿವಾಸಿ ಅಟೋ ಚಾಲಕ ದಿನೇಶ್(44). ಹಲ್ಲೆ ನಡೆಸಿ ವ್ಯಕ್ತಿಯ ಸಾವಿಗೆ ಕಾರಣವಾದ ಪಡುಬಿದ್ರಿ ಗ್ರೀನ್ ಸ್ಟ್ರೀಟ್ ನಿವಾಸಿ ಜೀನತ್(42) ಹಾಗೂ ಆಕೆಯ ತಂದೆ ಅಟೋ ಚಾಲಕ ಇಬ್ರಾಹಿಂ(62). ಕಳೆದ ಕೆಲವು ದಿನಗಳಿಂದ ತನ್ನ ಮಗಳಿಗೆ ಮ್ಯಾಸೇಜ್ ಮಾಡುತ್ತಿದ್ದು ಅದನ್ನು ವಿಚಾರಿಸುವುದಕ್ಕಾಗಿ ಪಡುಬಿದ್ರಿ ಬಸ್ ತಂಗುದಾಣಕ್ಕೆ ಕರೆದು ಹಲ್ಲೆ ನಡೆಸಿದಾಗ ಈ ದುರ್ಘಟನೆ ನಡೆಯಿತು ಎಂಬುದಾಗಿ ಇಬ್ರಾಹಿಂ ಹೇಳಿಕೊಳ್ಳುತ್ತಿದ್ದರೆ. ನಮ್ಮ ಸಹಪಾಠಿಯಾದ ಅಟೋ ಚಾಲಕ ದಿನೇಶ್ ಮ್ಯಾಸೇಜ್ ಮಾಡುವುದು ಬಿಡಿ ಅವರಿಗೆ ಬೊಬೈಲ್‌ನಲ್ಲಿ ನಂಬರ್ ಹುಡುಕಿ ಕರೆ ಮಾಡುವುದಕ್ಕೂ ಬರುವುದಿಲ್ಲ. ಕರೆ ಮಾಡುವುದಿದ್ದರೂ ನಮ್ಮನ್ನು ಆಶ್ರಹಿಸುತ್ತಿದ್ದ.. ಇದೀಗ ಪ್ರಕರಣದ ದಿಕ್ಕು ತಪ್ಪಿಸುವುದಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಮ್ಯಾಸೇಜ್ ಮಾಡಿದ್ದು ಹೌದಾದರೆ ಅದನ್ನು ತೋರಿಸಲಿ, ಆತನ ಮೊಬೈಲ್ ಕೂಡಾ ಅವರು ಕಸಿದುಕೊಂಡಿದ್ದಾರೆ ಎಂಬುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯ ಮುಂಭಾಗ ಸೇರಿದ ಮುಲ್ಕಿ ಅಟೋ ರಿಕ್ಷಾ ಚಾಲಕರು ಆರೋಪಿಸಿದ್ದಾರೆ.

Related posts

Leave a Reply