Header Ads
Breaking News

ಪಡುಬಿದ್ರಿ : ದೇಶ ಕಾದ ಸೈನಿಕ ಸಹಿತ ಕುಟುಂಬ ಬೀದಿ ಪಾಲು

ಕಳೆದ ತ್ತೊಂಭತ್ತು ವರ್ಷಗಳಿಂದ ತಮ್ಮ ಹಿರಿಯರು ಬಾಳಿ ಬದುಕಿದ ಮನೆ, ಇದೀಗ ಗೀತಾ ಕಾಮತ್ ಎಂಬವರ ಪರವಾಗಿ ನ್ಯಾಯಾಲಯದ ತೀರ್ಪು ಬಂದ ಹಿನ್ನಲೆಯಲ್ಲಿ ಗಡಿಯಲ್ಲಿ ದೇಶ ಕಾದು ಇದೀಗ ನಿವೃತ್ತಿ ಹೊಂದಿದ ಯೋಧನ ಕುಟುಂಬ ಸಹಿತ ಮತ್ತೊಂದು ಕುಟುಂಬ ಸೂರಿಲ್ಲದೆ ಬೀದಿಪಾಲದ ಘಟನೆ ಪಡುಬಿದ್ರಿಯ ಪಾಂದೆ ಎಂಬಲ್ಲಿ ನಡೆದಿದೆ.

ಮಕ್ಕಳು ಖುಷಿ-ಖುಷಿಯಾಗಿಯೇ ಮನೆಯಿಂದ ಶಾಲೆಗೆ ಹೋಗಿದ್ದಾರೆ, ಕೆಲಸಕ್ಕೆ ಹೋಗುವವರು ತಯಾರಿಯಲ್ಲಿದ್ದರು.. ಆಗ ಮನೆಯಂಗಳಕ್ಕೆ ಕಾನೂನು ಪಾಲಕರೊಂದಿಗೆ ಆಗಮಿಸಿದ ನ್ಯಾಯಾಲಯ ಪ್ರತಿನಿಧಿಗಳು, ನ್ಯಾಯಾಲಯದ ತೀರ್ಪು ದೂರುದಾರೆ ಗೀತ ಕಾಮತ್ ಪರವಾಗಿ ಬಂದಿದೆ, ನೀವು ಮನೆ ಖಾಲಿ ಮಾಡಿ ಎಂಬ ಮಾತು ಅವಳಿ ಕುಟುಂಬಗಳಿಗೆ ಆಘಾತ ನೀಡಿದೆ.

ಬಹಳಷ್ಟು ವರ್ಷಗಳಿಂದ ದೇವಕಿ ಪೂಜಾರಿ ಹಾಗೂ ದೇವಕಿ ಜೋಗಿ ಕುಟುಂಬದ ವಿರುದ್ಧ ಮನೆ ಖಾಲಿ ಮಾಡುವಂತ್ತೆ ಗೀತಾ ಕಾಮತ್ ನ್ಯಾಯಾಲಯದ ಮೆಟ್ಟಲೇರಿದ್ದರು. ಈ ಕುಟುಂಬಗಳ ಹಿರಿಯರ ಕಾನೂನು ಮಾಹಿತಿ ಕೊರತೆಯಿಂದಾಗಿ ಡಿಕ್ಲೇರೇಷನ್‍ನಿಂದಾಗಿ ಈ ಜಾಗ ತಮ್ಮ ಸ್ವಂತಕ್ಕೆ ಆಗುವ ಸಂದರ್ಭದಲ್ಲಿ ಮುಂದುವರಿಯದೆ ಇದ್ದುದ್ದರಿಂದ ಇದೀಗ ಈ ಕುಟುಂಬ ಸೂರು ಕಳೆದುಕೊಳ್ಳುವಂತ್ತಾಗಿದೆ.

ಈ ಬಗ್ಗೆ ಮಾತನಾಡಿದ ಮನೆಯ ಸದಸ್ಯೆ ಸುರೇಖ ಜೋಗಿ ಎಂಬವರು, ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ ಆದರೆ ದೂರುದಾರೆ ಗೀತಾ ಕಾಮತ್ ನ್ಯಾಯಾಲಯಕ್ಕೆ ತಪ್ಪು ದಾಖಲೆ ನೀಡಿದ್ದಲ್ಲದೆ ಈ ಜಾಗವನ್ನು ಸರ್ವೇ ನಡೆಸುವುದಕ್ಕೂ ಅವಕಾಶ ನೀಡದೆ ಇದೀಗ ನಮ್ಮ ಕುಟುಂಬಗಳನ್ನು ಬೀದಿ ಪಾಲು ಮಾಡಿದ್ದಾರೆ. ಇದೀಗ ಮಳೆ ಸುರಿಯುತ್ತಿದ್ದು, ನಮ್ಮ ಮುಂದಿನ ಬದುಕು ಹೇಗೆ ಎಂಬುದು ನಮಗೆ ತಿಳಿಯುತ್ತಿಲ್ಲ, ನಮ್ಮ ಈ ಕಷ್ಟ ಕಾಲದಲ್ಲಿ ನೆರವಿಗೆ ಚುನಾವಣಾ ಸಂದರ್ಭ ಸಾಲುಕಟ್ಟಿ ಮನೆ ಬಾಗಿಲ ಬಳಿ ಬರುತ್ತಿದ್ದ ಯಾವುದೇ ಜನಪ್ರತಿನಿಧಿಗಳೂ ಇತ್ತ ತಲೆ ಹಾಕಿಲ್ಲ. ಮನೆಯ ಒಳಗಿದ್ದ ಬಟ್ಟೆ-ಬರೆ ಸಹಿತ ಇತರೆ ಸಾಮಾಗ್ರಿಗಳು ಮಳೆ ನೀರಲ್ಲಿ ನೆನೆಯುತ್ತಿದೆ, ನಮ್ಮ ನೆರವಿಗೆ ಬರುತ್ತಾರೋ ಎಂಬ ನಿರೀಕ್ಷೆಯಲ್ಲಿದ್ದ ಗ್ರಾ.ಪಂ. ಪ್ರತಿನಿಧಿಗಳು ಸಹಿತ ಅಧಿಕಾರಿಗಳು ನಾವು ಅಸಾಹಯಕರು ಎಂಬುದಾಗಿ ಕೈ ಚೆಲ್ಲಿದ್ದಾರೆ. ಬದುಕುವ ದಾರಿ ಕಾಣುತ್ತಿಲ್ಲ ದೇವರು ಹೇಗೆ ನಡೆಸುತ್ತಾನೋ ಕಾಯ ಬೇಕಾಷ್ಟೇ ಎಂಬುದಾಗಿ ಕಣ್ಣೀರಿಡುತ್ತಾರೆ.

ಒಟ್ಟಿನಲ್ಲಿ ಸುದೀರ್ಘ ಅವಧಿಯಿಂದ ಬಾಳಿ ಬದುಕಿದ ಮನೆ ಇದೀಗ ಗೀತಾ ಕಾಮತ್‍ರವರ ಪರ ನ್ಯಾಯಾಲಯದಿಂದ ತೀರ್ಪು ಬಂದಿದ್ದು ಆಘಾತ ನೀಡಿದೆ. ಇದೀಗ ಯೋಧನ ಕುಟುಂಬ ಸಹಿತ ಮತ್ತೊಂದು ಕುಟುಂಬ ಸಹಿತ ಬೀದಿಪಾಲಾಗಿದ್ದು, ನೊಂದ ಕುಟುಂಬಕ್ಕೆ ಅಧಿಕಾರಿಗಳು ಸಹಿತ ಜನಪ್ರತಿನಿಧಿಗಳು ಸಹಾಯ ನೀಡಬೇಕಿದೆ.

Related posts

Leave a Reply

Your email address will not be published. Required fields are marked *