Header Ads
Header Ads
Breaking News

ಪಡುಬಿದ್ರಿ ಪಾಂದೆ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ನೇಮೋತ್ಸವ.

ಪಡುಬಿದ್ರಿಯ ಕೆಳಗಿನ ಪೇಟೆ ಪಾಂದೆ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ನೇಮೋತ್ಸವ ಭಕ್ತಾಧಿಗಳ ಕೂಡುವಿಕೆಯಿಂದ ಬಹಳ ವಿಜ್ರಂಭಣೆಯಾಗಿ ನಡೆದಿದೆ.ಈ ಸಂದರ್ಭ ಮಾತನಾಡಿದ ಗುರುರಾಜ್ ಪೂಜಾರಿ, ಹಳೆಯ ಇತಿಹಾಸ ಹೊಂದಿರುವ ಈ ಪಾಂದೆ ಗರೋಡಿಯ ವಾರ್ಷಿಕ ನೇಮೋತ್ಸವದ ಪೂರ್ವಬಾವಿಯಾಗಿ, ಡಿ.15 ರಂದ್ದು ಹಸಿರುವಾಣಿ ಹೊರೆ ಕಾಣಿಕೆಯೊಂದಿಗೆ ಗರಡಿ ಪ್ರವೇಶ ಧಾರ್ಮಿಕ ಕಾರ್ಯಕ್ರಮದೊಂದಿಗೆ ಆರಂಭಗೊಂಡು, 16ನೇ ತಾರೀಕಿಗೆ ಅಗೆಲು ಸೇವೆ, 17 ರ ರಾತ್ರಿ ಬ್ರಹ್ಮ ಬೈದರ್ಕಳ ನೇಮೋತ್ಸವ ಹಾಗೂ 18ರ ಸಂಜೆ 3-30ಕ್ಕೆ ದೇವಿ ಮಾಯಾಂದಲ ನೇಮೋತ್ಸವದೊಂದಿಗೆ ಈ ವರ್ಷದ ವಾರ್ಷಿಕ ನೇಮೋತ್ಸವ ಅಂತ್ಯ ಕಾಣಲಿದೆ ಎಂದರು.

ನೇಮೋತ್ಸವಕ್ಕಾಗಿ ಗರೋಡಿಯನ್ನು ಹೂ ಹಾಗೂ ವಿದ್ಯುತ್ ದೀಪದಿಂದ ಸಿಂಗರಿಸಲಾಗಿದ್ದು, ಸುಡುಮದ್ದು ಪ್ರದರ್ಶನ ನೇಮೋತ್ಸವದ ಮೆರುಗು ಹೆಚ್ಚಿಸಿದೆ. ನೇಮೋತ್ಸವದ ರಾತ್ರಿ ಪಡುಬಿದ್ರಿ ಹೊಸ ಮನೆಯವರಿಂದ ಅನ್ನ ಪ್ರಸಾದ ಸೇವೆ ಜರಗಿದ್ದು, ಈ ಸೇವೆಯಲ್ಲಿ ನೂರಾರು ಮಂದಿ ಸೇರಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರು ಸಹಿತ ಗರೋಡಿಯ ಟ್ರಸ್ಟ್‍ನ ಪ್ರಮುಖರು ಹಾಜರಿದ್ದರು.

Related posts

Leave a Reply