Breaking News

ಪಡುಬಿದ್ರಿ ಪೇಟೆಯ ಕಟ್ಟಡ ತೆರವಿನಲ್ಲೂ ರಾಜಕೀಯ, ಪ್ರಭಾವಿಗಳ ಕಟ್ಟಡಗಳಿಗೆ ರಾಜಕೀಯ ರಕ್ಷೆ, ಶೀಘ್ರ ತೆರವು ಕಾರ್ಯ ನಡೆಸುವಂತೆ ದಸಂಸ ಆಗ್ರಹ

ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಗಾಗಿ ಪಡುಬಿದ್ರಿ ಪೇಟೆಯಲ್ಲಿನ ಕಟ್ಟಡ ತೆರವುಗೊಳಿಸುವಂತೆ ಕಟ್ಟಡ ಮಾಲಿಕರುಗಳಿಗೆ ಜಿಲ್ಲಾಡಳಿತ ಅಂತಿಮ ಗಡವು ನೀಡಿ ಅದೆಷ್ಟೋ ತಿಂಗಳುಗಳು ಕಳೆದರೂ, ಇನ್ನೂ ಪ್ರಭಾವಿಗಳ ಕಟ್ಟಡ ತೆರವುಗೊಳ್ಳದೆ ರಾಜಕೀಯ ಡೊಂಬರಾಟ ಮುಂದುವರಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಶೀಘ್ರ ತೆರವು ಕಾರ್ಯ ನಡೆಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಮೂಲಕ ಮನವಿ ಸಲ್ಲಿಸುವುದಾಗಿ ದಲಿತ ಮುಖಂಡ ಶೇಖರ್ ಹೆಜಮಾಡಿ ಹೇಳಿದ್ದಾರೆ.
ಬಹಳಷ್ಟು ಕಟ್ಟಡ ಮಾಲಿಕರು ಅಭಿವೃದ್ಧಿ ದೃಷ್ಠಿಯಿಂದ ಸ್ಪಂದಿಸಿ ತಮ್ಮ ಕಟ್ಟಡಗಳನ್ನು ಕೆಡಹಿ ಕಾಮಗಾರಿಗೆ ಅನುವು ಮಾಡಿಕೊಟ್ಟಿದ್ದರೂ, ಕೆಲವೊಂದು ಪ್ರಭಾವಿಗಳು ಮಾತ್ರ ಇನ್ನೂ ಕೂಡಾ ವ್ಯಾಪಾರ ವಹಿವಾಟು ಮುಂದುವರಿಸುವ ಮೂಲಕ ಕಾನೂನು ನಮಗೆ ಅನ್ವಹಿಸುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ರಾಜಕಾರಣಿಗಳ ದ್ವಿಮುಖ ನೀತಿ ಇಲ್ಲಿ ಅನಾವರಣಗೊಂಡಿದೆ. ಜಿಲ್ಲಾಡಳಿತ ತಾನು ನೀಡಿದ ಆದೇಶವನ್ನು ರಾಜಕೀಯ ಮಂದಿಗಳ ಪ್ರಭಾವಕ್ಕೆ ಒಳಗಾಗಿ ಪದೇ ಪದೇ ವಿಸ್ತರಿಸುವ ಮೂಲಕ ಜನರನ್ನು ವಂಚಿಸುತ್ತಿದೆ. ಉತ್ತಮ ಕೆಲಸಗಳಿಂದ ಜಿಲ್ಲೆಯ ಜನರ ಮನಸ್ಸು ಗೆದ್ದ ಜಿಲ್ಲಾಧಿಕಾರಿಯವರು ಇಲ್ಲಿನ ಜನರ ಸಮಸ್ಯೆಗಳನ್ನು ಅರಿತು ಯಾರೋ ಒಂದಿಬ ಪ್ರಭಾವಿಗಳ ಹಿತಕ್ಕಾಗಿ ಸಾರ್ವಜನಿಕರ ಹಿತವನ್ನು ಹಾಳು ಮಾಡುವುದು ಸರಿಯಲ್ಲ.
ಇಷ್ಟರಲ್ಲೇ ಅದೆಷ್ಟೋ ಕಟ್ಟಡಗಳು ನೆಲ ಸಮಗೊಂಡಿದ್ದರೂ ಕೆಲವೊಂದು ಪ್ರಭಾವಿಗಳ ಕಟ್ಟಡಗಳಲ್ಲಿ ಇನ್ನೂ ಅಂಗಡಿಗಳು ಕಾರ್ಯಾಚರಿಸುತ್ತಿವೆ. ರಸ್ತೆಯಂಚಿನಲ್ಲೇ ವಾಹನಗಳನ್ನು ಪಾರ್ಕ್ ಮಾಡುವುದರಿಂದ ನಿರಂತರವಾಗಿ ಪೇಟೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ಬ್ಲಾಕ್ ಆಗುತ್ತಿದ್ದು ಈ ಬಗ್ಗೆ ಜನರು ಯಾರನ್ನು ಪ್ರಶ್ನಿಸಬೇಕೆಂಬವುದೇ ಅತೀ ದೊಡ್ಡ ಪ್ರಶ್ನೆಯಾಗಿದೆ. ಜಿಲ್ಲಾಡಳಿತದ ಕಟ್ಟಡ ತೆರವು ಕಾರ್ಯಕ್ಕೆ ತಮ್ಮ ಪ್ರಭಾವ ಬಳಸಿದ ರಾಜಕಾರಣಿಗಳು ಹಾಗೂ ರಾಜಕೀಯ ಒತ್ತಡಕ್ಕೆ ಮಣೆ ಹಾಕಿದ ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಇಲ್ಲಿನ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸುವುದಾಗಿ ದಲಿತ ಮುಖಂಡ ಶೇಖರ್ ಹೆಜಮಾಡಿ ತಿಳಿಸಿದ್ದಾರೆ.

Related posts

Leave a Reply