Breaking News

ಪಡುಬಿದ್ರಿ ಪೇಟೆ ತೆರವಿಗೆ ಕೊನೆದಿನ, ಸ್ವಯಂ ತೆರವಿಗೆ ಮುಂದಾಗದ ವ್ಯಾಪಾರಿಗಳು, ಹಳ್ಳ ಹಿಡಿದ ಜಿಲ್ಲಾಡಳಿತದ ಆದೇಶ


ಪಡುಬಿದ್ರಿ ಪೇಟೆ ತೆರವಿಗೆ ಅಂತಿಮ ದಿನ ಎಂಬುದಾಗಿ ಜಿಲ್ಲಾಡಳಿತ ಅಂಗಡಿ ಮಾಲಿಕರುಗಳಿಗೆ ಲಿಖಿತ ಗಡುವು ನೀಡಿದ್ದರೂ, ಈವರಗೆ ಅಂಗಡಿ ಮಾಲಿಕರು ತೆರವುಗೊಳಿಸುವ ಬಗ್ಗೆ ಮುಂದಡಿ ಇಡದೆ ನಿರಾಳಾವಾಗಿದ್ದು, ಇತ್ತ ಪೊಲೀಸರಿಗೂ ಈ ಬಗ್ಗೆ ಯಾವುದೇ ಮಾಹಿತಿ ರವಾನೆಯಾಗದ ಕಾರಣ ಜಿಲ್ಲಾಡಳಿತದ ಆದೇಶ ಹಳ್ಳ ಹಿಡಿದಿದೆಯ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸಾರ್ವಜನಿಕವಾಗಿ ಬಹಳ ಸಮಸ್ಯೆಯ ಮೂಲವಾಗಿದ್ದ ಪಡುಬಿದ್ರಿ ಪೇಟೆ ತೆರವಿಗೆ, ಕಳೆದ ಏಪ್ರಿಲ್ ಇಪ್ಪತ್ತರಂದು ಉಡುಪಿ ಜಿಲ್ಲಾಡಳಿತದ ಆದೇಶ ಪ್ರತಿಯನ್ನು ಪಡುಬಿದ್ರಿ ಪೇಟೆ ಪ್ರದೇಶದ ಸ್ಥಳದ ಮಾಲಿಕರಿಗೆ ರವಾನಿಸಿದೆ. ಕಳೆದ ಸುಮಾರು ಐದು ವರ್ಷಗಳಿಂದ ನಾನಾ ಕಾರಣ ನೀಡಿ ಪಡುಬಿದ್ರಿ ಪೇಟೆಯಲ್ಲಿ ಹೆದ್ದಾರಿ ಅಗಲಗೊಳ್ಳದಿರುವುದರಿಂದ ದಿನ ನಿತ್ಯ ಪೇಟೆ ಪ್ರದೇಶದಲ್ಲಿ ಹೆದ್ದಾರಿ ಬ್ಲಾಕ್ ಆಗುತ್ತಿದ್ದರಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಅನುಭವಿಸುವಂತ್ತಾಗಿದೆ.
ಇದೀಗ ಪಡುಬಿದ್ರಿ ಪೇಟೆ ತೆರವಿಗೆ ಅಂತಿಮ ನೋಟಿಸು ಜಾರಿಯಾಗುತ್ತಿದಂತೆ ಚುರುಕಾದ ಅಂಗಡಿ ಮಾಲಿಕರು ಜಿಲ್ಲಾಧಿಕಾರಿಗಳ ಭೇಟಿಗೆ ಯತ್ನಿಸಿದ್ದರಾದರೂ ಅದು ವಿಫಲಗೊಂಡಿದೆ, ಮತ್ತೆ ಪ್ರಯತ್ನ ಮುಂದುವರಿಸಿದ ಅವರು ಶುಕ್ರವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿಯಾಗಿದ್ದು ಅವರಿಂದ ಏನು ಅಭಯ ದೊರಕಿದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

Related posts

Leave a Reply