Header Ads
Breaking News

ಪಡುಬಿದ್ರಿ ಪೇಟೆ ಭಾಗದಲ್ಲಿ ಬೇಸಿಗೆ ಕಾಲಕ್ಕೆ ಧೂಳು..ಮಳೆಗಾಲಕ್ಕೆ ಕೆಸರು..!

ಜಿಲ್ಲಾಡಳಿತ ಜನರಿಂದ ಒತ್ತಾಯ ಪೂರ್ವಕವಾಗಿ ಪೊಲೀಸ್ ಬಲ ಪ್ರಯೋಗಿಸಿ ಟೋಲ್ ನೀಡುವಂತೆ ಮಾಡಿತ್ತಾದರೂ, ಅದಕ್ಕೆ ತಕ್ಕಂತೆ ರಸ್ತೆ ನಿರ್ಮಿಸಿ ಕೊಡಿಸುವಲ್ಲಿ ಜಿಲ್ಲಾಡಳಿತ ಸಹಿತ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದರಿಂದ ಪಡುಬಿದ್ರಿ ಮುಖ್ಯಪೇಟೆಯ ಸರ್ವಿಸ್ ರಸ್ತೆಗಳ ಅರೆಬರೆ ಕಾಮಗಾರಿಯಿಂದಾಗಿ ಜನರಿಗೆ ಬೇಸಿಗೆಯಲ್ಲಿ ಧೂಳಿನ ಅಭಿಷೇಕವಾದರೆ ಇದೀಗ ಮಳೆಗಾಳದಲ್ಲಿ ಕೆಸರಿನ ಸಿಂಚನವಾಗುತ್ತಿದೆ ಎಂಬುದಾಗಿ ಮಾಜಿ ತಾ.ಪಂ. ಸದಸ್ಯ ಭಾಸ್ಕರ್ ಪಡುಬಿದ್ರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಿರ್ದಿಷ್ಟ ಸಮಯದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಜನಪ್ರತಿನಿಧಿಗಳ ಶ್ರೀ ರಕ್ಷೆಯಿಂದ ನವಯುಗ್ ಕಂಪನಿ ಟೋಲ್ ಸಂಗ್ರಹ ನಡೆಸುತ್ತಿದೆ, ಇನ್ನು ಮೂವತ್ತು ವರ್ಷಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಜನರಿಂದ ಸುಲಿಗೆ ನಡೆಸಲು ಕಂಪನಿಗೆ ಸರ್ಕಾರವೇ ಅವಕಾಶ ನೀಡಿದೆ. ಕಂಪನಿ ತನ್ನ ಉದ್ಧೇಶ ಈಡೇರಿಸಿಕೊಂಡಿದ್ದರಿಂದ ಇದೀಗ ಕಾಮಗಾರಿ ಪೂರ್ಣಗೊಳಿಸುವ ಉತ್ಸಾವನ್ನೇ ಕಳೆದುಕೊಂಡತ್ತಿದೆ. ಇನ್ನು ಮಂಗಳೂರಿಗೆ ಹೋಗುವ ಬಸ್ ನಿಲ್ದಾಣದಲ್ಲಿ ಯುಪಿಸಿಎಲ್ ಹಾರು ಬೂದಿಯನ್ನು ಮಿಶ್ರ ಮಾಡಿ ರಸ್ತೆಗೆ ಚೆಲ್ಲಿದ್ದರಿಂದ ರಸ್ತೆ ನಡೆದಾಡಲೂ ಅಯೋಗ್ಯ ಎಂಬಂತ್ತಾಗಿದೆ. ಈ ಎಲ್ಲಾ ಅವ್ಯವಸ್ಥೆಗಳಿಂದ ಜನ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರೂ ದಪ್ಪ ಚರ್ಮದ ಜನಪ್ರತಿನಿಧಿಗಳು ಸಹಿತ ಸರ್ಕಾರಿ ಅಧಿಕಾರಿಗಳು ಕಣ್ಣಿದ್ದೂ ಕುಡುತನ ಅನುಭವಿಸುತ್ತಿದ್ದು, ಇವರ ಈ ನಿರ್ಲಕ್ಷ್ಯದ ವಿರುದ್ಧ ಜನರನ್ನು ಸೇರಿಸಿ ಪ್ರತಿಭಟಿಸುವುದು ಅನಿರ್ವಾಯವಾದೀತು ಎಂಬುದಾಗಿ ಭಾಸ್ಕರ್ ಪಡುಬಿದ್ರಿ ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *