Header Ads
Header Ads
Breaking News

ಪಡುಬಿದ್ರಿ ಪ್ರದೇಶದಲ್ಲಿ ನಾಗನಿಗೆ ವಿಶೇಷ ಪೂಜೆ ಪುನಸ್ಕಾರ.. ಜನಸಂದಾಣಿಯಿಂದ ಪಡುಬಿದ್ರಿ ಪೇಟೆಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್..

ಪಡುಬಿದ್ರಿ ಸಹಿತ ಸಾಂತೂರು ಹಾಸುಪಾಸಿನಲ್ಲಿ ನಾಗರ ಪಂಚಮಿಯ ಅಂಗವಾಗಿ ನಾಗನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದಿದ್ದು, ಈ ಸಂದರ್ಭ ಪಡುಬಿದ್ರಿ ಪೇಟೆಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಆದ ಕಾರಣ ಭಕ್ತಾಧಿಗಳು ಪರದಾಟ ನಡೆಸುವಂತ್ತಾಯಿತು.

ವಿಶೇಷವಾಗಿ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ನಾಗಬನದಲ್ಲಿ, ಹಾಗೂ ಸಾಂತೂರು ಸುಬ್ರಹ್ಮಣ್ಯ ದೇವಳದ ನಾಗಬನದಲ್ಲಿ ವಿಶೇಷ ಪೂಜೆಗಳು ಜರಗಿದ್ದು ಸಹಸ್ರರು ಭಕ್ತರು ಪಾಲ್ಗೊಂಡು ನಾಗದೇವರಿಗೆ ತನು-ತಂಬಿಲ ಸೇವೆಯನ್ನು ಅರ್ಪಿಸಿದ್ದಾರೆ.

ಪರಶುರಾಮ ಸೃಷ್ಠಿಯ ಈ ತುಳುನಾಡಿನಲ್ಲಿ ನಾಗರಾಧನೆಗೆ ವಿಶೇಷ ಗೌರವವಿದೆ. ನಾಗರಾಧನೆಯಿಂದ ಚರ್ಮಬಾಧೆಗಳು ದೂರವಾಗುವುದಲ್ಲದೆ, ಸಂತಾನ, ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದರು.
ಪಡುಬಿದ್ರಿಯಲ್ಲಿ ಬ್ಲಾಕ್ ಗುಮ್ಮ: ಪ್ರತೀ ವರ್ಷದಂತೆ ಪಡುಬಿದ್ರಿ ಪೇಟೆ ಪ್ರದೇಶದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು, ನಾಗರ ಪಂಚಮಿಗೆ ದೂರದೂರಿಗೆ ಪ್ರಯಾಣಿಸ ಬೇಕಾದ ಭಕ್ತಧಿಗಳು ಸಮಸ್ಯೆ ಅನುಭವಿಸುವಂತ್ತಾಯಿತು. ಇದೀಗ ಒಂದು ಕಡೆಯಲ್ಲಿ ಪೇಟೆಯಲ್ಲಿ ಕಟ್ಟಡ ತೆರವು ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಸಿಯಾಳ, ಹೂ ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳು ರಸ್ತೆಗಂಟಿಕೊಂಡೇ ವ್ಯಾಪಾರ ನಡೆಸುತ್ತಿದ್ದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply