Header Ads
Header Ads
Breaking News

ಪಡುಬಿದ್ರಿ :ಬಟ್ಟೆ ಚಪ್ಪಲಿ ಕದಿಯುತ್ತಿದ್ದಾತ ಸಿಸಿ ಕ್ಯಾಮಾರದಲ್ಲಿ ಸೆರೆ.

ಪಡುಬಿದ್ರಿಯ ಠಾಣಾ ವ್ಯಾಪ್ತಿಯ ಎರ್ಮಾಳು, ಪಡುಬಿದ್ರಿ ಹಾಗೂ ಹೆಜಮಾಡಿಗಳಲ್ಲಿ ವಿವಿಧ ರೀತಿಯ ವಿಕೃತರಿಂದ ಮಹಿಳೆಯರು ಸಂಜೆಯಾಗುತ್ತಿದಂತೆ ಮನೆಯಿಂದ ಹೊರ ಬರಲು ಹೆದರುತ್ತಿದ್ದು, ಇದೀಗ ಎರ್ಮಾಳಿನ ಮನೆಯೊಂದರ ಸಿಸಿ ಟಿವಿಯಲ್ಲಿ ಶೂ, ಬಟ್ಟೆ ಕದಿಯುತ್ತಿದ್ದ ಕಳ್ಳನೋರ್ವ ಸರೆಯಾಗಿದ್ದರೂ, ಈ ಬಗ್ಗೆ ಯಾವುದೇ ರೀತಿಯ ಪ್ರಯೋಜನವಾಗದೆ ಪ್ರಕರಣ ಮುಂದುವರಿಯುತಲೇ ಇದೇ ಎಂಬುದು ಗ್ರಾಮಸ್ಥರ ಆರೋಪ.

ಎರ್ಮಾಳಿನಲ್ಲಿ ತಡರಾತ್ರಿ ಹೊರಗಿದ್ದ ಚಪ್ಪಲ್, ಶೂ, ಬಟ್ಟೆಬರೆ ಹಾಗೂ ಅದರೊಂದಿಗಿದ್ದ ಹಗ್ಗ ಸಹಿತ ಕಳವು ನಡೆಸಿದರೆ, ಹೆಜಮಾಡಿ ಸುಲ್ತಾನ್ ರಸ್ತೆಯ ಬಳಿ ವಿಕೃತವಾಗಿ ನಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಇದ್ದು, ಮುಖಕ್ಕೆ ಬಟ್ಟೆ ಹೊದ್ದುಕೊಂಡು ಬರುವ ವ್ಯಕ್ತಿ ಮಹಿಳೆಯರು ವಾಸವಿರುವ ಮನೆಯ ಬಾಗಿಲು ಬಡಿದು ಅವರು ಬಾಗಿಲು ತೆಗೆಯುತ್ತಿದಂತೆ ಅವರಿಗೆ ಹಲ್ಲೆ ನಡೆಸಿ ಅವರು ಬೊಬ್ಬಿಡುತ್ತಿದಂತೆ ಓಡಿ ಪರಾರಿಯಾಗುತ್ತಿದ್ದಾನೆ, ಅದಲ್ಲದೆ ಮಹಿಳೆಯರ ಒಳ ಉಡುಪು, ಕೋಳಿ ಸಹಿತ ಅದರ ಮರಿಗಳನ್ನೂ ಕಳವು ನಡೆಸಿದ ಬಗ್ಗೆ ಗ್ರಾಮಸ್ಥರು ದೂರುತ್ತಾರೆ. ಬಾಗಿಲು ಬಡಿದು ಹೆದರಿಸುವ ಪ್ರಕೃಯೆಯಂತ್ತೂ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ಯುವಕರೇ ಕಾರ್ಯಾಚರಿಸಿ ಆ ವಿಕೃತನನ್ನು ಪತ್ತೆ ಹಚ್ಚಿ ಗ್ರಾಮದಲ್ಲಿ ಶಾಂತಿ ಕದಡದಂತ್ತೆ ಮಾಡಲು ಮುಂದಾಗಿದ್ದಾರೆ. ಪಡುಬಿದ್ರಿಯ ಕಾಡಿಪಟ್ಣ ರಸ್ತೆಯಲ್ಲಿ ಮತ್ತೊಂದು ವಿಚಿತ್ರ.. ಸಂಜೆಯಾಗುತ್ತಿದಂತೆ ಮಹಿಳೆಯರು, ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪೋನ್ ಸಂಭಾಷಣೆಯಲ್ಲಿದ್ದರೆ ಅವರ ಮೇಲೆ ಕಲ್ಲಿನ ದಾಳಿ ನಡೆಯುತ್ತಿದ್ದು, ಇದೀಗ ಕೆಲಸ ಮುಗಿಸಿ ಮನೆಗೆ ಮುಸಂಜೆಯ ವೇಳೆಯಲ್ಲಿ ತೆರಳುವ ಮಹಿಳೆಯರು ಒಂಟಿಯಾಗಿ ಸಂಚರಿಸಲು ಭಯಪಡುತ್ತಿದ್ದು, ಪಡುಬಿದ್ರಿ ಪೇಟೆಯಿಂದ ತಮ್ಮ ಮನೆಯ ಮಹಿಳೆ-ಯುವತಿಯರನ್ನು ಮನೆಗೆ ಕರೆತರಲು ಆ ಮನೆಯ ಗಂಡಸು ನಿತ್ಯ ಪೇಟೆಯಲ್ಲಿ ಕಾಯುವ ಸ್ಥಿತಿಯ ಬಗ್ಗೆ ಆ ಭಾಗದ ಮಂದಿ ಬೇಸರ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆಯಾಗಿ ಪ್ರತೀ ವಾರ್ಡಿನಲ್ಲೂ ಬೀಟ್ ಪೊಲೀಸ್ ಕಾರ್ಯಚರಿಸುತ್ತಿದ್ದರೂ ಈ ಜನರ ಸಮಸ್ಯೆಯ ಬಗ್ಗೆ ಏಕೆ ತಿಳಿಯುತ್ತಿಲ್ಲ, ತಿಳಿದರೂ ಏಕೆ ಈ ಬಗ್ಗೆ ಕಾರ್ಯಚರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಶ್ನೆ.

Related posts

Leave a Reply

Your email address will not be published. Required fields are marked *