Header Ads
Breaking News

ಪಡುಬಿದ್ರಿ ಬೀಡು ಬಳಿ ಕೊಳವೆ ಬಾವಿ ನಿರ್ಮಾಣ : ಗ್ರಾಮಸ್ಥರಿಂದ ಎರಡನೇ ಬಾರಿಯೂ ವಿರೋಧ

ಜನ ವಿರೋಧದ ನಡುವೆಯೂ ಬ್ಲೂ ಪ್ಲ್ಯಾಗ್ ಸೋಗಿನಲ್ಲಿ ಜನವಸತಿ ಪ್ರದೇಶವಾದ ಪಡುಬಿದ್ರಿ ಬೀಡು ಬಳಿ ಕೊಳವೆ ಬಾವಿ ನಿರ್ಮಾಣಕ್ಕೆ ಎರಡನೇ ಬಾರಿಯೂ ನಡೆಸಿದ ಪ್ರಯತ್ನವನ್ನು ಸ್ಥಳೀಯ ಗ್ರಾಮಸ್ಥರು ವಿಫಲಗೊಳಿಸಿದ್ದಾರೆ.

ಪಡುಬಿದ್ರಿ ಗ್ರಾ.ಪಂ.ನ ಎರಡು ಮತ್ತು ನಾಲ್ಕನೇ ವಾರ್ಡ್ ವ್ಯಾಪ್ತಿಯ ಪಡುಬಿದ್ರಿ ಬೀಡು ಬಳಿ ಕೊಳವೆ ಬಾವಿ ನಿರ್ಮಾಣ ನಡೆಸುವ ವಾಹನವೊಂದು ಪ್ರತ್ಯಕ್ಷವಾಗಿದ್ದು, ಇದನ್ನು ತಿಳಿದ ಸ್ಥಳೀಯ ಗ್ರಾಮಸ್ಥರು ಆ ಪ್ರದೇಶದಲ್ಲಿ ಸೇರಿ ವಿರೋಧಿಸಿದಾಗ ಪಡುಬಿದ್ರಿ ಬೀಚ್ ಬಳಿ ನಿರ್ಮಾಣ ಹಂತದಲ್ಲಿರುವ ಬ್ಲೂ ಪ್ಲ್ಯಾಗ್ ಯೋಜನೆಯ ಪ್ರಮುಖ ನಾನು, ಅಲ್ಲದೆ ಎಕ್ಸ್ ಮಿಲಿಟರಿ ನಾನು ಎಂಬುದಾಗಿ ಜನರ ಮುಂದೆ ಪೊಸ್ ನೀಡುತ್ತಾ ಪಡುಬಿದ್ರಿ ಗ್ರಾಮ ಪಂಚಾಯಿತ್ ನಮಗೆ ಅನುಮತಿ ಪತ್ರ ನೀಡಿದೆ ಎಂಬುದಾಗಿ ಮೊಬೈಲ್ ನಲ್ಲಿ ಪತ್ರವೊಂದನ್ನು ಪ್ರದರ್ಶಿಸಿ ಜನರನ್ನು ಯಾಮಾರಿಸಲು ಯತ್ನಿಸಿದಾಗ, ಆ ಪತ್ರವನ್ನು ಓದಿದಾಗ ಸ್ಥಳೀಯ ನಿವಾಸಿ ಶ್ರೀನಾಥ್ ಹೆಗ್ಡೆ, ಗ್ರಾ.ಪಂ. ಅನುಮತಿ ನೀಡಿರ ಬಹುದು ಆದರೆ ಇದೇ ಜಾಗದಲ್ಲಿ ಕೊಳವೆ ಬಾವಿ ನಿರ್ಮಿಸಲು ಅನುಮತಿ ನೀಡಿಲ್ಲ ಎಂದಾಗ ತೆಪ್ಪಗಾದ ಆ ಮನುಷ್ಯ, ಇದೇ ಸಂದರ್ಭ ಘಟನಾ ಸ್ಥಳದಲ್ಲಿದ್ದ ಗ್ರಾ.ಪಂ.ಸದಸ್ಯ ಮಯ್ಯದ್ದಿ ಎಂಬವರು ಮಾತನಾಡಿ, ಬ್ಲೂ ಪ್ಲ್ಯಾಗ್ ಹೆಸರಲ್ಲಿ ಈ ಹಿಂದೆ ಸುಮಾರು ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಸೂಚನೆ ಇದೆ ಎಂಬುದಾಗಿ ಕೃಷಿ ಯನ್ನೇ ಜೀವನಾದಾರವಾಗಿ ನಡಿಸಿಕೊಂಡು ಬಂದಿರುವ ಈ ಪ್ರದೇಶದಲ್ಲಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಪಿಡಿಒ ಕೊಳವೆ ಬಾವಿಗೆ ಅನುಮತಿ ನೀಡಿದ್ದರು. ಆ ಸಂದರ್ಭ ಜನ ವಿರೋಧಿಸಿದ್ದರಿಂದ ನಾವು ಜನ ಪರವಾಗಿ ಗ್ರಾ.ಪಂ.ಸಭೆಯಲ್ಲಿ ವಿರೋಧಿಸದ್ದೇವು ಎಂದಿದ್ದಾರೆ.

ಆ ಬಳಿಕ ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ವಿ. ಅಮೀನ್ ನಾವು ಆರಂಭದಲ್ಲಿ ಬ್ಲೂ ಪ್ಲ್ಯಾಗ್ ಮನವಿಗೆ ಮನ್ನಿಸಿ ಅನುಮತಿ ನೀಡಿದ್ದು ಹೌದು, ಆದರೆ ಆ ಬಳಿಕ ಸದಸ್ಯರ ಹಾಗೂ ಗ್ರಾಮಸ್ಥರ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತವಾದಾಗ ಆ ಅನುಮತಿಯನ್ನು ರದ್ದು ಮಾಡಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ, ಇದೀಗ ಯಾವುದೇ ಅನುಮತಿ ನೀಡಿಲ್ಲ ಜನರ ವಿರೋಧ ವಿದ್ದ ಪ್ರದೇಶದಲ್ಲಿ ನಾವು ಅನುಮತಿ ನೀಡೆವು ಎಂದರು.  ಆ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ಪೂರಕ ದಾಖಲೆಯೊಂದಿಗೆ ಬಾರದ ಹೊರತು ಸಮಸ್ಯೆ ಸೃಷ್ಠಿ ಮಾಡಲು ಸ್ಥಳಕ್ಕೆ ಬಾರದಂತ್ತೆ ತಾಕೀತು ಮಾಡಿದಾಗ ಕೊಳವೆ ಬಾವಿ ನಿರ್ಮಾಣ ವಾಹನ ಸಹಿತ ಮರಳಿದ್ದಾರೆ.ಈ ಸಂದರ್ಭ ಗ್ರಾ.ಪಂ.ಸದಸ್ಯ ಕರುಣಾಕರ್ ಪೂಜಾರಿ, ಮಾಜಿ ಸದಸ್ಯ ರವಿ ಶೆಟ್ಟಿ ಸಹಿತ ಹತ್ತಾರು ಗ್ರಾಮಸ್ಥರು ಜೊತೆಗಿದ್ದರು.

Related posts

Leave a Reply

Your email address will not be published. Required fields are marked *