Header Ads
Header Ads
Breaking News

ಪಡುಬಿದ್ರಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ : ಓಶಿಯನ್ ವಾರಿಯರ್‍ಸ್‌ಗೆ ಪಿಬಿಸಿ ಟ್ರೋಫಿ-2018

ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಕೂಟದಲ್ಲಿ ನವೀನ್‌ಚಂದ್ರ ಜೆ.ಶೆಟ್ಟಿ ಮಾಲೀಕತ್ವದ ಓಶಿಯನ್ ವಾರಿಯರ್‍ಸ್ ತಂಡ, ಫೈನಲ್‌ನಲ್ಲಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾಲೀಕತ್ವದ ಸ್ಕಂದ ಫ್ರೆಂಡ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಪ್ರಥಮ ಬಂದ ಓಶಿಯನ್ ವಾರಿಯರ್‍ಸ್ ಪಿಬಿಸಿ ಟ್ರೋಫಿ ಸಹಿತ ನಗದು ರೂ.೧೫,೫೫೫/ನ್ನು ಪಡೆಯಿತು. ಫೈನಲ್‌ನಲ್ಲಿ ಸೋತ ಸ್ಕಂದ ಫ್ರೆಂಡ್ಸ್ ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ.9,999ನ್ನು ಪಡೆಯಿತು.ಸೆಮಿಫೈನಲ್‌ಗಳಲ್ಲಿ ಓಶಿಯನ್ ವಾರಿಯರ್‍ಸ್ ತಂಡವು ಸುಕುಮಾರ್ ವೈ.ಮತ್ತು ರಮೀಝ್ ಹುಸೈನ್ ಮಾಲೀಕತ್ವದ ನವರಂಗ್ ವಾರಿಯರ್‍ಸ್ ತಂಡವನ್ನೂ, ಸ್ಕಂದ ಫ್ರೆಂಡ್ಸ್ ತಂಡವು ಶಂಕರ್ ಕಂಚಿನಡ್ಕ ಮಾಲೀಕತ್ವದ ಯಶ್ ವಾರಿಯರ್‍ಸ್ ತಂಡವನ್ನೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಒಟ್ಟು 8ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಿದ್ದವು.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ನವೀನ್‌ಚಂದ್ರ ಜೆ. ಶೆಟ್ಟಿ, ಯಾವುದೇ ಸಮಾರಂಭಗಳು ಯಶಸ್ಸು ಕಾಣ ಬೇಕಾಗಿದ್ದರೆ ಪ್ರೇಕ್ಷಕರ ಸಹಕಾರ ಅಗತ್ಯವಾಗಿದೆ, ಪಡುಬಿದ್ರಿಯ ಜನತೆಯ ಉತ್ತಮ ಸಹಕಾರದಿಂದ ಈ ಬ್ಯಾಡ್ಮಿಂಡನ್ ಕ್ರೀಢಾಕೂಟ ಯಶಸ್ಸಿನ ಹಾದಿಯಲ್ಲಿ ಸಾಗುವಂತ್ತಾಗಿದೆ.

ಯಾವುದೇ ಜಾತಿ ಮತ ಭೇದವಿಲ್ಲದೆ ನಡೆಯುವ ಈ ಕ್ರೀಡೆಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದರು.ಉಮಿಲ್ ತುಳು ಚಿತ್ರದ ನಾಯಕಿ ಪೂಜಾ ಶೆಟ್ಟಿ ಮಾತನಾಡಿ, ತುಳು ಚಿತ್ರಗಳನ್ನು ತುಳುವರಾದ ತಾವು ವೀಕ್ಷಣೆ ಮಾಡುವ ಮೂಲಕ ನನ್ನಂಥಹ ಅದೇಷ್ಟೋ ಕಲಾವಿಧರಿಗೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ, ಅದಲ್ಲದೆ ತುಳು ಚಿತ್ರಗಳು ಹಿಟ್ ಆಗುವ ಮೂಲಕ ಇತರೆ ಬಾಷೀಗರು ನಮ್ಮತ್ತ ಕಣ್ಣು ಹಾಯಿಸುವಂತ್ತಾಗ ಬೇಕೆಂದರು.ಓಶಿಯನ್ ವಾರಿಯರ್‍ಸ್‌ನ ಸಂಜಯ್ ಆರ್‌ಎಮ್ ಬೆಸ್ಟ್ ಆಲ್‌ರೌಂಡರ್,ಬೆಸ್ಟ್ ಸ್ಮ್ಯಾಶರ್ ಆಗಿ ಸ್ಕಂದ ವಾರಿಯರ್‍ಸ್‌ನ ಮನೋಜ್ ವೈಯಕ್ತಿಕ ಪ್ರಶಸ್ತಿ ಪಡೆದರು. ಸ್ಕಂದ ವಾರಿಯರ್‍ಸ್ ಅತ್ಯುತ್ತಮ ಶಿಸ್ತುಬದ್ಧ ತಂಡ ಪ್ರಶಸ್ತಿ ಗಳಿಸಿತು.ರಾಷ್ಟ್ರೀಯ ಹೈಜಂಪ್ ಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ,ರಾಜ್ಯ ಬ್ಯಾಡ್ಮಿಂಟನ್ ಆಟಗಾರ ಸಂಜಯ್ ಆರ್‌ಎಮ್,ಉಮಿಲ್ ಚಿತ್ರ ನಟಿ ಪೂಜಾ ಶೆಟ್ಟಿ, ಕಂಬಳಬೆಟ್ಟು ಚಿತ್ರನಟಿ ಐಶ್ವರ್ಯಾ ಆಚಾರ್ಯ, ಝೀ ಕನ್ನಡದ ಕನ್ನಡ ಕೋಗಿಲೆ ಫೈನಲಿಸ್ಟ್ ನಿಕಿತ್ ಕರ್ಕೇರ ಹಾಗೂ ಪಂದ್ಯಾಟದ ಪ್ರಮುಖ ಆಯೋಜಕರಾದ ಪ್ರದೀಪ್ ಆಚಾರ್ಯ ಮತ್ತು ಮಿನ್ನಾ ಎಸ್.ಶೆರೀಫ್‌ರವರನ್ನು ಸನ್ಮಾನಿಸಲಾಯಿತು.ಪಂದ್ಯಾಕೂಟದ ತೀರ್ಪುಗಾರರಾಗಿ ಅಕ್ಷತ್ ಉಡುಪಿ, ಲೋಹಿತಾಕ್ಷ ಸುವರ್ಣ ಮತ್ತು ಸುಮಿತ್ ಎರ್ಮಾಳ್ ಕಾರ್ಯಾ ನಿರ್ವಾಹಿಸಿದ್ದರು, ಈ ಸಂದರ್ಭ ಸಂತೋಷ್ ಪಡುಬಿದಿ ಪ್ರದೀಪ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply