Header Ads
Breaking News

ಪಡುಬಿದ್ರಿ ಮೆಸ್ಕಾಂ ಕಚೇರಿಗೆ ಕಳ್ಳರ ಲಗ್ಗೆ

ಪಡುಬಿದ್ರೆಯ ಮೆಸ್ಕಾಂ ಕಚೇರಿಯಲ್ಲಿದ್ದ ಎಟಿಪಿ ಯಂತ್ರದಿಂದ 4.5ಲಕ್ಷ ರೂ. ಕಳವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪಡುಬಿದ್ರೆಯ ಶ್ರೀ ಮಹಾದೇವಿ ಕಟ್ಟಡದಲ್ಲಿರುವ ಮೆಸ್ಕಾಂ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಎಟಿಪಿ ಯಂತ್ರದ ಹಿಂಬದಿಯನ್ನು ಒಡೆದು ಸುಮಾರು 4.5ಲಕ್ಷ ರೂ. ಕಳ್ಳತನ ನಡೆಸಿದ್ದು, ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಕಛೇರಿಯ ಎಟಪಿಯಲ್ಲಿ ಇರಿಸಿದ ಹಣಕ್ಕೆ ಯಾವುದೇ ಭದ್ರತೆ ವ್ಯವಸ್ಥೆ ಇಲ್ಲ. ಹಾಗೆಯೇ ಸಿಸಿ ಕ್ಯಾಮರಾದ ಅಳವಡಿಕೆಯೂ ಇಲ್ಲದೇ ಇರೋದು ಘಟನೆಗೆ ಕಾರಣವಾಗಿದೆ.

ವಾರದ ಸಂತೆ ಮಂಗಳವಾರ ಇರುವುದರಿಂದ ಈ ಕಚೇರಿಯಲ್ಲಿ ಅಧಿಕ ಬಿಲ್ ಮೊತ್ತ ಸಂಗ್ರಹವಾಗಿತ್ತು. ಸ್ಥಳಕ್ಕೆ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.

Related posts

Leave a Reply

Your email address will not be published. Required fields are marked *