Header Ads
Breaking News

ಪಡುಬಿದ್ರಿ ರಸ್ತೆ ವಿಭಜಕದಲ್ಲಿ ಉರಿಯದ ದಾರಿದೀಪ

ಕಳೆದ ಮೂರು ವರ್ಷಗಳ ಹಿಂದೆ ಪಡುಬಿದ್ರಿ ಪೇಟೆಭಾಗದ ರಸ್ತೆ ವಿಭಜಕದಲ್ಲಿ ಹಾಕಲಾಗಿದ್ದ ದಾರಿದೀಪಗಳು, ಈ ವರೆಗೆ ಒಂದು ದಿನವೂ ಉರಿಯದೆ ಆಯುಷ್ಯ ಕಳೆದುಕೊಳ್ಳುತ್ತಿದ್ದರೂ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಯಾಗಳು ಸಹಿತ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.

ಜನರಿಂದ ಯಾವುದೇ ಮೂಲಾಜಿ ಇಲ್ಲದೆ ಟೋಲ್ ಪಡೆಯುವ ಕಂಪನಿ ತನ್ನ ಕರ್ತವ್ಯ ಮರೆತು ವ್ಯವಹರಿಸುತ್ತಿದ್ದರೂ ಅವರನ್ನು ಪ್ರಶ್ನಿಸುವ ತಾಕತ್ತು ಯಾರಿಗೂ ಇಲ್ಲವೇ…ಇಲ್ಲ ಆ ಕಂಪನಿಯ ಋಣ ಭಾರ ಸಂಬಂಧಪಟ್ಟವರ ಬಾಯಿ ಮುಚ್ಚಿಸಿದೆಯೇ ಎಂಬುದು ಪ್ರಜ್ಜಾವಂತ ನಾಗರಿಕರ ಪ್ರಶ್ನೆ. ಒಂದು ಕಡೆಯಿಂದ ಕಳೆದ ಹತ್ತು ವರ್ಷಗಳಿಂದ ತಮಗಿಷ್ಟ ಬಂದತೆ ನಾಲ್ಕುದಿನ ಕಾಮಗಾರಿ ನಡೆಸಿದರೆ ತಿಂಗಳಕಾಲ ವಿರಾಮ, ಇದೀಗ ಮಳೆ ಸಂದರ್ಭ ಕಾಮಗಾರಿ ಎಂಬ ಪ್ರಹಸನ ನಡೆಸಿ ಮಳೆ ಕಡಿಮೆಯಾಗುತ್ತಿದಂತೆ ಒಂದು ತಿಂಗಳ ವಿರಾಮದ ಬಳಿಕ ಇದೀಗ ಸೇತುವೆ ಕಾಮಗಾರಿ ಆರಂಭಿಸಿದರಾದರೂ ಮತ್ಯಾವಾಗ ಸ್ಥಗಿತಗೊಳ್ಳುತ್ತೋ ದೇವರೇ ಬಲ್ಲ. ಇಷ್ಟಾದರೂ ಅವರನ್ನು ಕೇಳುವ ತಾಕತ್ತು ಯಾರಿಗೂ ಇಲ್ಲ. ಪಡುಬಿದ್ರಿ ಪೇಟೆ ಪ್ರದೇಶದಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚುತ್ತಿದಂತೆ ಕಗ್ಗತ್ತಲು. ನವಯುಗ್ ಕಂಪನಿಯ ನಿರ್ಲಕ್ಷ್ಯಕಳ್ಳರಿಗೆ ವರದಾನವಾಗುತ್ತಿದೆ. ಮುಂದಿನ ದಿನದಲ್ಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ ಎನ್ನುತ್ತಾರೆ ಸಂತೋಷ್ ಶೆಟ್ಟಿ.

Related posts

Leave a Reply

Your email address will not be published. Required fields are marked *