Header Ads
Header Ads
Breaking News

ಪಡುಬಿದ್ರಿ ವೃತ್ತ ಮಟ್ಟದ ಕಬಡ್ಡಿ ಪಂದ್ಯಾಕೂಟ

ಬಹುಮಾನ ಪಡೆಯುವುದಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ತಪ್ಪಲ್ಲ, ಆದರೆ ಬಹುಮಾನವನ್ನು ಪಡೆಯುವುದಕ್ಕಾಗಿ ಸತತ ಅಭ್ಯಾಸ ಬೇಕೆಂಬುದನ್ನು ಮರೆಯುವುದು ತಪ್ಪು. ಆ ನಿಟ್ಟಿನಲ್ಲಿ ನಿರಂತರ ಸತತ ಅಭ್ಯಾಸ ಮಾಡಿದಾಗ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲ ಜೀವನದಲ್ಲೂ ವಿಜಯಶಾಲಿಯಾಗಲು ಸಾಧ್ಯ ಎಂಬುದಾಗಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ವಿ. ಅಮೀನ್ ಹೇಳಿದ್ದಾರೆ.

ಅವರು ಶಿಕ್ಷಣ ಇಲಾಖೆ ಸಹಿತ ಪಡುಬಿದ್ರಿ ಉರ್ದು ಶಾಲೆ ಆಯೋಜಿಸಿದ ಪಡುಬಿದ್ರಿ ವೃತ್ತ ಮಟ್ಟದ ಕಬಡ್ಡಿ ಪಂದ್ಯಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಶಸ್ತಿ ಪಡೆದಲ್ಲಿ ಹೆತ್ತ ತಂದೆ-ತಾಯಿ ಸಹಿತ ಊರು-ರಾಜ್ಯ-ರಾಷ್ಟ್ರಗಳ ಹೆಸರನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಲು ಸಾಧ್ಯ ಎಂದರು. ಈ ಸಂದರ್ಭ ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ.ಪಂ. ಸದಸ್ಯೆ ನೀತಾ ಗುರುರಾಜ್, ಮಾತೃ ಶಾಲಾ ಅಧ್ಯಕ್ಷ ಶಬ್ಬೀರ್ ಅಹಮ್ಮದ್, ದೈಹಿಕ ಶಿಕ್ಷಣಾಧಿಕಾರಿ ಮಧುಕರ್,ಶಿಕ್ಷಣ ಸಯೋಜಕ ಶಂಕರ್, ಎಂ.ಪಿ. ಮೊಹಿದ್ಧಿನಬ್ಬ, ಶಾಲಾ ಮುಖ್ಯ ಶಿಕ್ಷಕ ಶಫಿಯುಲ್ಲ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *