Header Ads
Header Ads
Breaking News

ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಅಜೆಕಾಯಿ ಸೇವೆ. ಆಷಾಢ ಮಾಸದಲ್ಲಿ ಸಂಭ್ರಮದ ಜಾತ್ರೆ..

ಪಡುಬಿದ್ರಿಯ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನವು ಚಿದಂಬರ ರಹಸ್ಯ ಹೊತ್ತಿರುವ ಬಯಲು ಆಲಯವಾಗಿದೆ. ಇಲ್ಲಿ ಯಾವುದೇ ಆಕರ್ಷಕ ದೇವಾಲಯದ ಕಟ್ಟಡ ಕಲ್ಪನೆಗಳಿಲ್ಲ. ಬರೇ ಕಾಡಿನಿಂದ, ಮರಗಳಿಂದ ಕೂಡಿ ಪ್ರಾಕೃತಿಕ ಸೊಬಗಿನ ತಾಣವಾಗಿದೆ. ಸಮುದ್ರದ ಮರಳೇ ಪ್ರಸಾದ ವಾಗಿರುವ ಪಂಚದೈವಿಕ ಸ್ಥಾನವಾಗಿ ಮೆರೆದಿದೆ. ಪ್ರಾಪಂಚಿಕವಾಗಿ ಪ್ರಸಿದ್ಧಿಯನ್ನು ಪಡೆದಿರುವ ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ತುಳು ತಿಂಗಳ ಆಟಿಯ 16ನೇ ದಿನ ಆಚರಿಸಲಾಗುತ್ತದೆ. ಅಜೆಕಾಯಿ ಸೇವೆ ಎಂದೇ ಪ್ರಸಿದ್ಧ.ಇಲ್ಲಿಗೆ ಆಗಮಿಸದ ಭಕ್ತಾದಿಗಳೇ ಇಲ್ಲ ಅನ್ನ ಬಹುದು. ಈ ಊರಿನ ಭಕ್ತಾದಿಗಳು ಬೆಳಿಗ್ಗೆ ಇಲ್ಲಿ ದರ್ಶನ ಮಾಡಿಯೇ ತಮ್ಮ ದೈನಂದಿನ ಕಾರ್ಯಕ್ಕೆ ತೊಡಗುತ್ತಾರೆ. ವಿಶೇಶವೆಂದರೆ ಈ ಕ್ಷೇತ್ರದಲ್ಲಿ ಸಮುದ್ರದ ಮರಳೇ ಪ್ರಸಾದರೂಪದಲ್ಲಿ ದೊರೆಯುದರಿಂದ ಇದನ್ನು ಶೇಕರಿಸಲೋಸುಗ ದೇವಕಾರ್ಯದ ವಿಪ್ರರ ಜೊತೆಗೆ ಸುಮಾರು 50 ಬ್ರಾಹ್ಮಣರು ತೆಂಗಿನ ನಾರಿನ ಹೆಡಿಗೆ ಜೊತೆಗೆ ಸಮುದ್ರ ಬಳಿ ತೆರಳುತ್ತಾರೆ.

ಬೆಳ್ಳಂಬೆಳಿಗೆ ಶುಚಿರ್ಭೂತರಾಗಿ ಸಮುದ್ರ ತಟಕ್ಕೆ ಬಂದು ಅಲ್ಲಿ ಸಮುದ್ರ ಸ್ನಾನ ಮಾಡಿ ದೇವ ಕಾರ್ಯದ ವಿಪ್ರರು ಹೆಡಿಗೆಗಳಿಗೆ ಮರಳು ತುಂಬಿಸಿ ಕೊಡುತ್ತಾರೆ. ಮರಳು ತುಂಬಿದ ಹೆಡಿಗೆಗಳನ್ನು ತಲೆಯಲ್ಲಿ ಹೊತ್ತು ಸುಮಾರು ಎರಡು ಕಿ.ಮೀ ನಡೆದು ಸನ್ನಿಧಾನಕ್ಕೆ ತಂದು ಅರ್ಪಿಸುತ್ತಾರೆ. ಇದನ್ನೇ ವರ್ಷಂಪೂರ್ತಿ ಲಕ್ಷಾಂತರ ಭಕ್ತರಿಗೆ ಪ್ರಸಾದ ರೂಪವಾಗಿ ಹಂಚಲಾಗುತ್ತದೆ. ಮುಂಬೈ ಮತ್ತು ಅಹಮದ್‌ಬಾದ್ ನಿಂದ ಪ್ರತಿ ವರ್ಷ ಈ ಜಾಗಕ್ಕೆ ಬಂದು ನಮ್ಮ ಮನಸಿನ ಭಾವನೆಗಳನ್ನು ಬೇಡಿಕೊಳ್ಳುತ್ತೇವೆ. ಕಷ್ಟಗಳೆಲ್ಲಾ ದೂರ ಆಗುತ್ತಾ ಇದೆ. ಈ ವರ್ಷ ಕೂಡ ನಮ್ಮಗೆ ಇಲ್ಲಿಗೆ ಬರುವ ಭಾಗ್ಯ ಸಿಕ್ಕಿದೆ. ನಾವು ತುಂಬಾ ಖುಷಿಯಲ್ಲಿದ್ದೇವೆ. ತುಂಬಾ ನಂಬಿಕೆ ಇರುವ ಜಾಗ . ಊರ ಪರವೂರ ಜನರು ಕೂಡ ಇಲ್ಲಿಗೆ ಬರುತ್ತಾರೆಲಾಲಾಜಿ ಮೆಂಡನ್ (ಕಾಪು ಶಾಸಕರು) ಪ್ರಾಕೃತಿಕವಾಗಿ ಆರಾಧಿಸಿಕೊಂಡು ಬಂದಿರುವಂಥಹ ಈ ಕ್ಷೇತ್ರ ನಮ್ಮ ವಿಧಾನ ಸಭ ವ್ಯಾಪ್ತಿಯಲ್ಲಿರುವುದು ನಮ್ಮ ಸೌಭಾಗ್ಯ. ಬರುವ ಭಕ್ತರ ಆಶೋತ್ತರಗಳನ್ನು ಈಡೇರಿಕೆ ಮಾಡಿಕೊಂಡು ಕಾನನದಲ್ಲಿ ಪ್ರತಿಷ್ಟಿತಳಾದ ಈ ಸನ್ನಿಧಾನವನ್ನು ನಂಬಿಕೊಂಡು ಬಂದ ಭಕ್ತರ ಆಶೋತ್ತರಗಳು ಈಡೇರಲಿ ಎಂದು ಶುಭ ಹಾರೈಸಿದರು.

Related posts

Leave a Reply