Header Ads
Breaking News

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆದ ಹಗಲು ರಥೋತ್ಸವ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಬಾವಿಯಾಗಿ ಹಗಲು ರಥೋತ್ಸವ ಬಹಳ ವಿಜ್ರಂಬಣೆಯಿಂದ ನಡೆದಿದ್ದು, ಊರ-ಪರವೂರ ಸಹಸ್ರಾರು ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಪುಣ್ಯ ಪ್ರಸಾದವನ್ನು ಸ್ವೀಕರಿಸಿ ಧನ್ಯರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಪ್ರಶಾಂತ್ ಶೆಟ್ಟಿ, ಊರ-ಪರವೂರ ಭಕ್ತಾಧಿಗಳ ಸಹಕಾರದಿಂದ ಪ್ರತೀ ವರ್ಷದಂತೆ ಈ ವರ್ಷವೂ ವಾರ್ಷಿಕ ಜಾತ್ರಾ ಮಹೋತ್ಸವ ಬಹಳ ವಿಜ್ರಂಬಣೆಯಿಂದ ನಡೆಯುತ್ತಿದೆ. ಇದೀಗ ಹಗಲು ರಥೋತ್ಸವ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಹಸ್ರಾರು ಭಕ್ತಾಧಿಗಳ ಭಾಗವಹಿಸುವಿಕೆಯಿಂದ ನಡೆದಿದ್ದು, ರಾತ್ರಿ ಬ್ರಹ್ಮ ರಥೋತ್ಸವ ನಡೆಯಲಿದೆ, ನಾಳೆ ಸಂಜೆ ನಾಲ್ಕರ ಸುಮಾರಿಗೆ ಐತಿಹಾಸಿಕ ಚೆಂಡು ಉತ್ಸವ ನಡೆಯಲಿದ್ದು, ಈ ಧಾರ್ಮಿಕ ಹಿನ್ನಲೆಯುಲ್ಲ ಚೆಂಡು ಉತ್ಸವಕ್ಕೆ ಯುವಕರು ಬಹಳ ಉತ್ಸಾಹದಿಂದ ಪಾಲ್ಗೋಳ್ಳುತ್ತಾರೆ. ಈ ಪುಣ್ಯ ಧಾರ್ಮಿಕ ಕಾರ್ಯಕ್ರಮದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದರು. ಈ ಸಂದರ್ಭ ದೇವಳದ ಅನುವಂಶಿಕ ಮೋಕ್ತೇಸರ ರತ್ನಾಕರ್‌ರಾಜ್ ಬೀಡು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *