Header Ads
Breaking News

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಐತಿಹಾಸಿಕ ಚೆಂಡು ಉತ್ಸವ

ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂತಿಮ ದಿನ ನಡೆಯುವ, ಐತಿಹಾಸಿಕ ಚೆಂಡು ಉತ್ಸವ ಸೇವೆಯಲ್ಲಿ ಗ್ರಾಮ ಹಾಗೂ ಸ್ಥಳೀಯ ಗ್ರಾಮಗಳ ಹತ್ತಾರು ನವ ಯುವಕರ ದಂಡು ಪಾಲ್ಗೊಂಡು ಚೆಂಡು ಸೇವೆ ಯಶಸ್ವಿಯಾಗಿ ನಡೆದಿದೆ.
ಸಂಪ್ರಾಯದಾಯಿಕವಾಗಿ ನಡೆಯುವ ಈ ಚೆಂಡು ಉತ್ಸವ ಮಂಗಳೂರು ಜಿಲ್ಲೆಯ ಪೊಳಲಿಯಲ್ಲಿ ಹೊರತು ಪಡಿಸಿ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಮಾತ್ರ ಕಾಣ ಸಿಗುತ್ತದೆ. ವಾರ್ಷಿಕ ಜಾತ್ರೆಯ ಅಂತಿಮ ದಿನ ಸಂಜೆ ಸ್ಥಳೀಯ ಹಕ್ಕಿನ ಮನೆಮಂದಿ ಚೆಂಡು ನಿರ್ಮಿಸಿ ದೇವಸ್ಥಾನಕ್ಕೆ ತಂದು ಒಪ್ಪಿಸಿದ ಬಳಿಕ, ಗುತ್ತಿನ ಮನೆಯವರು ಚೆಂಡನ್ನು ದೇವಳದ ಮುಂಭಾಗದ ಗದ್ದೆಗೆ ಹಾಕುವ ಮೂಲಕ ಚೆಂಡು ಉತ್ಸವಕ್ಕೆ ಚಾಲನೆ ನೀಡಲಾಗುವುದು, ಈ ಚೆಂಡೂ ಉತ್ಸವ ಫುಟ್‌ಬಾಲ್ ಮಾದರಿಯಲ್ಲಿ ನಡೆಯುತ್ತಿದ್ದು, ಧಾರ್ಮಿಕ ಆಚರಣೆಯ ಒಂದು ಭಾಗ ಇದಾಗಿದ್ದರಿಂದ ಚೆಂಡು ಉತ್ಸವದಲ್ಲಿ ಭಾಗವಹಿಸುವ ಯಾವನೇ ವ್ಯಕ್ತಿ ಪಾದರಕ್ಷೆ ಧರಿಸುವಂತ್ತಿಲ್ಲ, ಮೂರು ಗೋಲು ಹೊಡೆಯುವ ಅವಕಾಶ ಇಲ್ಲಿದ್ದು ಎರಡು ಗೋಲು ಹೊಡೆದ ಭಾಗದ ಮಂದಿ ವಿಜಯಿಶಾಲಿಯಾಗುವ ಮೂಲಕ ಈ ವರ್ಷದ ಚೆಂಡು ಉತ್ಸವಕ್ಕೆ ತೆರೆ ಬೀಳಲಿದೆ. ಈ ಬಗ್ಗೆ ಸ್ಥಳೀಯರಾದ ರಾಜೇಶ್ ಶೇರಿಗಾರ್ ವಿ೪ಗೆ ಮಾಹಿತಿ ನೀಡಿದ್ದಾರೆ

Related posts

Leave a Reply

Your email address will not be published. Required fields are marked *