Header Ads
Breaking News

ಪಡುಬಿದ್ರಿ ಸಹಕಾರಿ ಸೊಸೈಟಿ ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ : ಸುದ್ದಿಗೋಷ್ಟಿಯಲ್ಲಿ ವೈ. ಸುಧೀರ್ ಕುಮಾರ್ ಹೇಳಿಕೆ

ಪಡುಬಿದ್ರಿ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿಯಮಿತ ಪಡುಬಿದ್ರಿ ಇದರ ನಿರ್ದೇಶಕ ಮಂಡಳಿಗೆ ಚುನಾವಣಾ ದಿನಾಂಕದಿಂದ ಮುಂದಿನ ಐದು ವರ್ಷಗಳ ಅವಧಿಯ ಚುನಾವಣೆಗೆ ಸಂಬಂಧಿಸಿದಂತೆ ನಾಮ ಪತ್ರ ಸಲ್ಲಿಸಿರುವ ಉಮೇದ್ವಾರರ ನಾಮ ಪತ್ರಗಳನ್ನು ಪರಿಶೀಲಿಸಿ ಸಂಘದ ಉಪವಿಧಿಯ ಪ್ರಕಾರ ಆಯ್ಕೆಯಾಗಬೇಕಾದ ಸ್ಥಾನಗಳ ಸಂಖ್ಯೆಗೆ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯು ಸರಿ ಸಮಾನವಾಗಿರುವುದರಿಂದ ಹದಿಮೂರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವೈ. ಸುಧೀರ್ ಕುಮಾರ್ ಹೇಳಿದರು.

ಪಡುಬಿದ್ರಿಯಲ್ಲಿನ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಚುನಾವಣಾ ವೆಚ್ಚವಾಗಿ ಸುಮಾರು 4 ಲಕ್ಷ ರೂ. ಹೊರೆಯು ಉಳಿತಾಯವಾಗಿದ್ದು, ಅದನ್ನು ಸಹಕಾರಿ ಸಂಸ್ಥೆಯ ಬೆಳವಣಿಗೆಗೆ ಉಪಯೋಗಿಸಲಾಗುತ್ತದೆ. ಯಾವುದೇ ರಾಜಕೀಯ ಪಕ್ಷಗಳಿಗೆ ನಿರ್ದೇಶಕರು ಮೀಸಲಾಗಿರದೆ, ಎಲ್ಲರನ್ನೂ ಸೇರಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಮತ್ತಷ್ಟು ಮುಂದುವರೆಸಿಕೊಂಡು ಹೋಗುವ ಇರಾದೆಯನ್ನು ಹೊಂದಲಾಗಿದೆ.

ಸಾಮಾನ್ಯ ಕ್ಷೇತ್ರದಲ್ಲಿ ಸುಧೀರ್ ಕುಮಾರ್ ವೈ., ಗುರುರಾಜ್ ಪೂಜಾರಿ, ರಸ್ರೂಲ್ ವೈ. ಜಿ, ಶಿವರಾಮ್ ಎನ್ ಶೆಟ್ಟಿ, ವಾಸುದೇವ, ಮಾಧವ ಆಚಾರ್ಯ, ರಾಜಾರಾಮ್ ರಾವ್, ಮಹಿಳಾ ಮೀಸಲಾತಿಯಲ್ಲಿ ಸುಚರಿತ, ಕುಸುಮಾ ಎಮ್ ಕರ್ಕೇರಾ, ಹಿಂದುಳಿದ ವರ್ಗ (ಎ)ಮೀಸಲು, ಗಿರೀಶ್ ಫಲಿಮಾರ್, ಪ್ರವರ್ಗ ಬಿ ಸ್ಟೇನಿ ಕ್ವಾಡ್ರಸ್, ಪ.ಜಾತಿ ಮೀಸಲು ಯಶವಂತ, ಪ.ಪಂಗಡ ಮೀಸಲು ಕಾಂಚನ ಆಯ್ಕೆಗೊಂಡಿರುವ ನಿರ್ದೇಶಕರುಗಳು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *