Header Ads
Header Ads
Breaking News

ಪಡುಬಿದ್ರಿ-ಹೆಜಮಾಡಿ ಗಡಿ ವಿವಾದ .ಮಳೆನೀರು ಹರಿದು ಹೋಗು ವಿಚಾರ ದೂಡಾಟ.

ಹೆಜಮಾಡಿ-ಪಡುಬಿದ್ರಿ ಗ್ರಾಮಪಂಚಾಯಿತ್ ಗಡಿಭಾಗ ಎನ್ ಎಸ್ ರೋಡ್ ಎಂಬಲ್ಲಿ ಮಳೆ ನೀರು ಹರಿದು ಹೋಗುವ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ದೂಡಾಟದವರೆಗೂ ಹೋಗಿ ಅಂತಿಮವಾಗಿ ಎರಡೂ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಮತ್ತು ಪಿಡಿಒಗಳು ಸ್ಥಳಕ್ಕೆ ಆಗಮಿಸಿ ಒಂದು ಹಂತದ ಮಾತುಕತೆ ನಡೆಸುವ ಮೂಲಕ ತಾತ್ಕಾಲಿಕ ಶಮನಗೊಂಡಿದೆ. ಈ ಹಿಂದೆ ಯಾವುದೇ ಚರಂಡಿಗಳು ಇಲ್ಲದ ಸಂದರ್ಭ ಆ ಪರಿಸರದ ನೀರು ಮಾಮೂಲು ತೋಡುಗಳಲ್ಲಿ ಹರಿದು ಹೋಗುತ್ತಿತ್ತು, ಆದರೆ ಇದೀಗ ರಸ್ತೆ ಕಾಂಕ್ರೆಟಿಕರಣಗೊಂಡ ಕಾರಣ ಹೊಸತಾಗಿ ಕಾಂಕ್ರೆಟ್ ಚರಂಡಿಗಳು ನಿರ್ಮಿಸಲಾಗದ್ದು, ಎರಡೂ ಇಕ್ಕೆಲುಗಳ ಮಳೆನೀರು ಪಡುಬದಿಯ ಒಂದೇ ಪ್ರದೇಶಕ್ಕೆ ಹರಿದು ಹೋಗುತ್ತಿದ್ದರಿಂದ ಘರ್ಷಣೆಗೆ ಕಾರಣವಾಗಿತ್ತು.

 

ಆ ಬಳಿಕ ಎರಡೂ ಗ್ರಾಮಗಳ ಅಧ್ಯಕ್ಷರು-ಪಿಡಿಒ ಆಗಮಿಸಿ ಎರಡೂ ಗ್ರಾಮಗಳ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವ ಭಾಗದಲ್ಲಿ ಮಳೆನೀರು ಹರಿದು ಹೋಗುವ ಚರಂಡಿ ಒತ್ತುವರಿಯಾಗಿದೆಯೋ ಅವುಗಳನ್ನು ತೆರವುಗೊಳಿಸಿ ಮಳೆನೀರು ಸುಗಮವಾಗಿ ಹರಿದು ಹೋಗುವುದಕ್ಕೆ ಅವಕಾಶ ಮಾಡಿಕೊಡುವ ಭರವಸೆ ವ್ಯಕ್ತ ಪಡಿಸುವುದರೊಂದಿಗೆ ಸಮಸ್ಯೆ ತಾತ್ಕಾಲಿಕ ಪರಿಹಾರ ಕಂಡಿದೆ. ಈ ಸಂದರ್ಭ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ಅಮೀನ್, ಪಿಡಿಒ ಪಂಚಾಕ್ಷರಿ ಸ್ವಾಮಿ, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷೀ ಪುತ್ರನ್, ಪಿಡಿಒ ಮಮತ ಶೆಟ್ಟಿ ಹಾಗೂ ಗ್ರಾಮಸ್ಥರನೇಕರು ಸ್ಥಳದಲ್ಲಿದ್ದರು.

Related posts

Leave a Reply