Header Ads
Breaking News

ಪಡುಬಿದ್ರೆಯಲ್ಲಿ ಕೋಳಿಯಂಕಕ್ಕೆ ಪೊಲೀಸರ ದಾಳಿ

ತೆಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಡೆ ಬೆಟ್ಟುವಿನಲ್ಲಿ ನಡೆಯುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೆÇಲೀಸರು ನಗದು, ಕೋಳಿ ಸಹಿತ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತರನ್ನು ಎರ್ಮಾಳು ಹಾಗೂ ಪರಿಸರದ ನಿವಾಸಿಗಳಾದ ಸಂದೀಪ್, ರಮೇಶ್, ಸುಕೇಶ್ ಹಾಗೂ ಶಂಕರ್ ಎಂದು ಗುರುತಿಸಲಾಗಿದೆ. ಆಲಡೆಬೆಟ್ಟು ಬಳಿಯ ಸರ್ಕಾರಿ ದಟ್ಟ ಹಾಡಿಯಲ್ಲಿ ಕೊರೊನಾ ಭೀತಿಯ ಹೊರತಾಗಿಯೂ ಅಕ್ರಮ ಕೂಟ ಸೇರಿದ ನೂರಾರು ಮಂದಿ ಸಾಮಾಜಿಕ ಅಂತರ ಸಹಿತ ಮಾಸ್ಕ್ ರಹಿತವಾಗಿ ಅಪಾಯಕಾರಿ ಸ್ಥಿತಿಯಲ್ಲಿ ಕೋಳಿಯಂಕ ನಡೆಸುತ್ತಿದ್ದ ಬಗ್ಗೆ ಗುಪ್ತ ಮಾಹಿತಿ ಪಡೆದ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಪಡುಬಿದ್ರಿ ಪಿಎಸ್ ಐ ಸುಬ್ಬಣ್ಣ ಬಿ., ನೇತ್ರತ್ವದ ತಂಡ ದಾಳಿ ನಡೆಸಿದಾಗ ನಾಲ್ವರು ಸೆರೆ ಸಿಕ್ಕರೆ ಉಳಿದವರು ಪರಾರಿಯಾಗಿದ್ದಾರೆ, ಬಂಧಿತರಿಂದ ಐದು ಜೀವಂತ ಕೋಳಿ, ಒಂದು ಸತ್ತ ಕೋಳಿ, 3030 ರೂ ನಗದು ಹಾಗೂ ಒಂದು ಮೊಬೈಲ್ ಸೆಟ್ ವಶಪಡಿಸಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *