Header Ads
Breaking News

ಪಡುಬಿದ್ರೆ : ಎಸ್‌ಸಿಡಿಸಿಸಿ ಶಾಖೆಯ ಹವಾನಿಯಂತ್ರಿತ ನೂತನ ಕಟ್ಟಡ ಉದ್ಘಾಟನೆ

ಮಹಿಳೆಯರು ಕೇವಲ ಅಡುಗೆ ಮನೆಯ ಉಸ್ತುವಾರಿಗಳು ಎಂಬತ್ತಿದ್ದು, ಎಲ್ಲದಕ್ಕೂ ಮನೆಗಂಡಸರ ಮುಂದೆ ಕೈಯೋಡ್ಡುವ ಕಾಲವಿತ್ತು, ಇದೀಗ ಮಹಿಳೆಯರು ಸ್ವಾವಲಂಬಿಗಳಾಗಿದ್ದು ತಮ್ಮ ಸ್ವಂತ ಕಾಲಮೇಲೆ ತಾವು ನಿಲ್ಲವಂತ್ತಾಗಿದೆ, ಇದಕ್ಕೆ ಮೂಲ ಕಾರಣ ನಮ್ಮ ನವೋದಯ ಸ್ವಸಹಾಯ ಸಂಸ್ಥೆ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂಬುದಾಗಿ ಎಸ್‌ಸಿಡಿಸಿಸಿ ನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಅವರು ಮಾತೃ ಸಂಸ್ಥೆಯ ನೂತನ ಹವಾನಿಯಂತ್ರಿತ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅಥಿಯಾಗಿ ಭಾಗವಹಿಸಿ ಮಾತನಾಡಿದ ಕೇಂಜ ಶ್ರೀಧರ ತಂತ್ರಿ, ಬ್ಯಾಂಕ್ ಎಂಬುದು ನಂಬಿಕೆಯ ಸಂಕೇತ, ಇಲ್ಲಿ ಯಾವುದೇ ವ್ಯವಹಾರಗಳು ನಡೆಯುವುದಿದ್ದರೂ ನಂಬಿಕೆ ಆಧಾರದಲ್ಲಿ ನಡೆಯುತ್ತದೆ. ಶ್ರೀಮಂತ ಠೇವಣೆ ಇಡುವುದಿದ್ದರೂ,, ಬಡವ ಸಾಲ ಪಡೆಯುವುದಿದ್ದರೂ ಪರಸ್ಪರ ನಂಬಿಕೆಯಿಂದ ಮಾತ್ರ ಸಾಧ್ಯವಾಗುವುದು ಎಂದರು. ಇದೇ ಸಂದರ್ಭ ಅನಾರೋಗ್ಯದಿಂದ ಬಳಲುತ್ತಿದ್ದ ಕುಟುಂಬಗಳಿಗೆ ಹಾಗೂ ಕೆರೆ ಅಭಿವೃದ್ಧಿಗೆ ಸಂಸ್ಥೆಯ ಮೂಲಕ ಧನ ಸಹಾಯ ಮಾಡಲಾಯಿತು.

ಈ ಸಂದರ್ಭ ಬೆಳಪು ಶಾಖೆಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ, ಮುಖ್ಯ ಅಥಿತಿಗಳಾಗಿ ಲಾಲಾಜಿ ಆರ್. ಮೆಂಡನ್, ಅದಾನಿ ಸಂಸ್ಥೆಯ ಪ್ರಮುಖರಾದ ಕೀಶೋರ್ ಆಳ್ವ, ವಿನಯ ಕುಮಾರ್ ಸೊರಕೆ, ಪ್ರಫುಲ್ಲ ಶೆಟ್ಟಿ, ದೇವರಾಜ್ ರಾವ್ ನಡಿಮನೆ, ವಸಂತಿ ಮಧ್ವರಾಜ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *