Header Ads
Breaking News

ಪಡುಮಲೆಯಲ್ಲಿ ನವೀಕೃತ ದೇವಸ್ಥಾನದ ಪ್ರತಿಷ್ಠೆಯ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು : ಪಡುಮಲೆಯಲ್ಲಿ ನವೀಕೃತ ದೇವಸ್ಥಾನದ ಪ್ರತಿಷ್ಠೆಯ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರವನ್ನು ಎಪ್ರಿಲ್ 5 ರಂದು ಪುತ್ತೂರು ತಾಲೂಕಿನ ಬಂಟರ ಸಂಘಕ್ಕೆ ಹಸ್ತಾಂತರಿಸಿ ಬಂಟ ಸಮಾಜದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಬಂಟ ಸಮಾಜದ ಅಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಉಪಾಧ್ಯಕ್ಷರಾದ ನಿವೃತ್ತ ವಿಜಯ ಬ್ಯಾಂಕ್ ನ Asst.general Manager ರಾದ ಜಗಜೀವನ್ ದಾಸ್ ರೈ, ಕೋಶಾಧಿಕಾರಿಯಾದ ನಿತ್ಯಾನಂದ ಶೆಟ್ಟಿ, ಪುತ್ತೂರು ನಗರ ಬಂಟ ಸಮಾಜದ ಅಧ್ಯಕ್ಷರಾದ ಶಿವರಾಮ ಆಳ್ವ ಹಾಗೂ ಬಂಟ ಸಮಾಜದ ಸದಸ್ಯರಾದ ಜಯಕುಮಾರ್ ರೈ ಮಿತ್ರಂಪಾಡಿ, ಶಶಿರಾಜ್ ರೈ ಮತ್ತು ಕಾರ್ಯದರ್ಶಿಯಾದ ರಂಜನಿ ಶೆಟ್ಟಿ ಉಪಸ್ಥಿತರಿದ್ದರು. ಅದಲ್ಲದೆ ಪಡುಮಲೆ ಕೋಟಿ ಚೆನ್ನಯ್ಯ ಟ್ರಸ್ಟ್ ನ‌ ಉಪಾಧ್ಯಕ್ಷರಾದಂತಹ ವಿಜಯ್ ಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿಯಾದ ಶೀಧರ ಪಟ್ಲ, ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸಮಿತಿ ಪುತ್ತೂರು ಇದರ ಅಧ್ಯಕ್ಷರಾದ ವೇದನಾಥ ಸುವರ್ಣ, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸೀತಾರಾಮ ರೈ ಕೆದಂಬಾಡಿ ಗುತ್ತು ಹಾಗೂ ನವೀನ್ ರೈ ಉಪಸ್ಥಿತರಿದ್ದರು. ಬಂಟ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಡುಮಲೆಯ ಬ್ರಹ್ಮ ಕಲಶೋತ್ಸವಕ್ಕೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

Related posts

Leave a Reply

Your email address will not be published. Required fields are marked *