Header Ads
Breaking News

ಪಡುಮಲೆ ಕೋಟಿ-ಚೆನ್ನಯರ ಜನ್ಮಸ್ಥಾನ : ಎ.23 ಮತ್ತು 24ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮ

ಪಡುಮಲೆ ಕೋಟಿ-ಚೆನ್ನಯ್ಯ ಜನ್ಮ ಸ್ಥಾನ ಸಂಚಲನಾ ಸೇವಾಟ್ರಸ್ಟ್ ಆಶ್ರಯದಲ್ಲಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನ ಸಭೆಯು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಎಪ್ರೀಲ್ 23 ಮತ್ತು 24 ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

ಪೂರ್ವ ಭಾವಿಯ ಸಭೆಯಲ್ಲಿ ಮಾತನಾಡಿದ ಸಂಚಲನಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು, ಮುಂದಿನ ಪೀಳಿಗೆಗೆ ಕೋಟಿ-ಚೆನ್ನಯರ ಇತಿಹಾಸ ಚರಿತ್ರೆಯ ನೈಜ ಚಿತ್ರಣ ದೊರಕಬೇಕು ಎನ್ನುವುದು ಟ್ರಸ್ಟ್‍ನ ಉದ್ದೇಶ. ಪಡು ಮಲೆಯ ಗತ ಇತಿಹಾಸದ ಮರು ನಿರ್ಮಾಣವನ್ನು ಮೂಲಕ ಯಾವ ರೀತಿಯಲ್ಲೂ ಧಕ್ಕೆ ಬಾರದಂತೆ ಮಾಡಿ ಭವಿಷ್ಯದ ಪೀಳಿಗೆಗೆ ಅರ್ಪಿಸುವ ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಆನಂತರ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಪಡುಮಲೆ ಕ್ಷೇತ್ರ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ನಡೆಯುವುದು ನಮ್ಮ ಸುಯೋಗ. ಅರಮನೆ, ಕಂಬಳ ಗದ್ದೆ ಅಭಿವೃದ್ಧಿ ಸೇರಿದಂತೆ ಇನ್ನೂ ಅನೇಕ ಕಾರ್ಯಗಳು ಆಗಬೇಕಿವೆ. ಸಮಾಜದ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭ ಆಡಳಿತ ಮೊಕ್ತೇಸರ ವಿನೋದ್ ಆಳ್ವ, ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಟ್ರಸ್ಟ್‍ನ ಗೌರವ ಅಧ್ಯಕ್ಷರಾದ ರಂಜನ್ ಮಿಜಾರು, ರುಕ್ಮಯ್ಯ ಪೂಜಾರಿ, ಉಪಾಧ್ಯಕ್ಷರಾದ ಪದ್ಮನಾಭ ಕೋಟ್ಯಾನ್, ಶ್ರೀಧರ್ ಪಟ್ಲ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದರೆ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಟಿ. ಸುವರ್ಣ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *