Header Ads
Header Ads
Breaking News

ಪಣಂಬೂರಿನ ಮುಖ್ಯ ಕಚೇರಿಯಲ್ಲಿ ಕೋಸ್ಟ್‌ಗಾರ್ಡ್ 43ನೇ ರೈಸಿಂಗ್ ಡೇ ಕಾರ್ಯಕ್ರಮ

ರಾಜ್ಯದ ಕೋಸ್ಟ್‌ಗಾರ್ಡ್ ತನ್ನ ೪೩ನೇ ರೈಸಿಂಗ್ ದಿನವನ್ನು ಆಚರಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮಂಗಳೂರಿನ ಪಣಂಬೂರ್‌ನ ಕೋಸ್ಟ್‌ಗಾರ್ಡ್‌ನ ಮುಖ್ಯ ಕಚೇರಿಯಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೋಸ್ಟ್‌ಗಾರ್ಡ್‌ನ ಸಿಬ್ಬಂದಿ ಮತ್ತು ಕುಟುಂಬವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಲ್ಲದೆ ಕೋಸ್ಟ್‌ಗಾರ್ಡ್‌ನ ವೆಟರನ್ಸ್ ಅವರಿಗೂ ಆಹ್ವಾನ ನೀಡಲಾಗಿತ್ತು.
ಇದೇ ವೇಳೆ ಕೋಸ್ಟ್ ಗಾರ್ಡ್‌ನ ಕಮಾಂಡರ್ ಡಿಐಜಿ ಎಸ್.ಎಸ್. ದಾಸಿಲಾ ಅವರು ಮಾತನಾಡಿ, ಕೋಸ್ಟ್ ಗಾರ್ಡ್ ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ತೊಂದರೆಯಲ್ಲಿದ್ದ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 192 ಮಂದಿಯ ಜೀವ ಉಳಿಸಿದ್ದಾರೆ ಎಂದು ಹೇಳಿದರು.

Related posts

Leave a Reply