Header Ads
Header Ads
Breaking News

ಪಣಂಬೂರು ಸಂಕ್ರಾತಿ ಉತ್ಸವ ಜ.14 ರಂದು ನಟರಾಜ ರಂಗ ಸಂಗಮ ಬಯಲು ರಂಗ ಮಂಟಪ ಲೋಕಾರ್ಪಣೆ

ಪಣಂಬೂರು ಸಂಕ್ರಾತಿ ಉತ್ಸವದ ಪ್ರಯುಕ್ತ ಜನವರಿ ೧೪ರಂದು ನಟರಾಜ ರಂಗ ಸಂಗಮ ಎಂಬ ಬಯಲು ರಂಗ ಮಂಟಪವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ,ಸಂಚಾಲಕ ಸಂತೋಷ್ ಐತಾಳ್, ಕಳೆದ 15 ವರ್ಷಗಳಿಂದ ಚಿಣ್ಣರಿಗೆ ಸುಪ್ತ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ರಂಗ ಕಲಾವಿದ ಪಿ.ಬಿ. ಐತಾಳರ ನೆನಪಿಗಾಗಿ ನಟರಾಜ ರಂಗ ಸಂಗಮ ಎಂಬ ಬಯಲು ರಂಗ ಮಂಟಪ ನಿರ್ಮಿಸಲಾಗಿದೆ. ಅಲ್ಲದೆ ಪಣಂಬೂರು ಸಂಕ್ರಾತಿ ಉತ್ಸವದ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಸಂಕ್ರಾಂತಿ ಉತ್ಸವ ಸಮಿತಿಯ ಸಂಚಾಲಕರಾದ ಡಾ. ಪಿ. ಸತ್ಯಮೂರ್ತಿ ಐತಾಳ್, ಮೈರ್ಪಾಡಿ ಶಂಕರ್ ನಾರಾಯಣ, ರವಿ ಅಲೆವೂರಾಯ, ಶರತ್ ಮುಂತಾದವರು ಉಪಸ್ಥಿತರಿದ್ದರು.

Related posts