Header Ads
Header Ads
Header Ads
Breaking News

ಪಣಂಬೂರ್ ಬೀಚ್‌ನಲ್ಲಿ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕುಸ್ತಿ ಸಂಘ ಮಂಗಳೂರು ಮತ್ತು ನವ ಮಂಗಳೂರು ಬಂದರು ಸ್ಟಾಫ್ ಅಸೋಸಿಯೇಶನ್ ಇದರ ಸಹಕಾರದೊದಿಗೆ ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾಟ ಪಣಂಬೂರು ಬೀಚ್‌ನಲ್ಲಿ ನಡೆಯಿತು.


ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ, ದಿ.ಎಂ. ಲೋಕಯ್ಯ ಶೆಟ್ಟಿಯವರ 15ನೇ ವರ್ಷದ ಸಂಸ್ಮರಣಾರ್ಥ ನಡೆದ ಕುಸ್ತಿ ಪಂದ್ಯಾಟಕ್ಕೆ ಶಾಸಕ ಬಿ. ಎ. ಮೊಹಿಯುದ್ದೀನ್ ಬಾವ ಚಾಲನೆ ನೀಡಿದರು.
ಈ ಸಂದರ್ಭ ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಅಧ್ಯಕ್ಷರಾದ ಪ್ರಕಾಶ್ ವಿ. ಕರ್ಕೇರ ಅವರು ಮಾತನಾಡಿ, ದಿ.ಎಂ. ಲೋಕಯ್ಯ ಶೆಟ್ಟಿಯವರು ಓರ್ವ ಧೀಮಂತ ನಾಯಕರಾಗಿದ್ದವರು, ಅತ್ತ್ಯುತ್ತಮ ಸಂಘಟಕರೂ ಆಗಿದ್ದರು. ಅವರ ಸ್ಮರಣಾರ್ಥ ನಡೆಯುವ ಈ ಕಾರ್‍ಯಕ್ರಮ ಶ್ಲಾಘನೀಯವಾದುದು ಎಂದರು.

ಕಾರ್‍ಯಕ್ರಮದಲ್ಲಿ ನವಮಂಗಳೂರು ಬಂದರು ಮಂಡಳಿ ಚೇರ್‌ಮ್ಯಾನ್ ಇನ್‌ಚಾರ್ಜ್ ಸುರೇಶ್ ಪಿ. ಶಿರ್‍ವಾಡ್ಕರ್, ಕಾರ್‍ಯಕ್ರಮದ ಗೌರವಾಧ್ಯಕ್ಷರಾದ ಎಂ. ಸುರೇಶ್ಚಂದ್ರ ಶೆಟ್ಟಿ, ಬಿಜೆಪಿ ಮಂಗಳೂರು ನಗರ ಉತ್ತರ ಅಧ್ಯಕ್ಷರಾದ ಡಾ. ಭರತ್ ಶೆಟ್ಟಿ, ಮಂಗಳೂರು ಪಾಲಿಕೆಯ ಹಣಕಾಸು ಸಮಿತಿಯ ಅಧ್ಯಕ್ಷರಾದ ಪ್ರತಿಭಾ ಕುಳಾಯಿ, ಉದ್ಯಮಿ ಜೆ.ಡಿ. ವೀರಪ್ಪ, ಮ್ಯಾನೇಜಿಂಗ್ ಪಾರ್ಟ್ನಾರ್ ಹಸ್‌ನ್ ಹಾಜಿ ಮತ್ತು ಕಂಪನಿಯ ಮಹಮ್ಮದ್ ಆಮೀನ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply