Header Ads
Header Ads
Breaking News

ಪಣಿಯೂರಿನಲ್ಲಿ ನೆರೆಗೆ ಸಿಲುಕಿದ ಮೂವರ ರಕ್ಷಣೆ.ಉಡುಪಿಯ ಅಗ್ನಿ ಶಾಮಕದಳದ ಕಾರ್ಯಚರಣೆ.

ಗದ್ದೆ ಪ್ರದೇಶದಲ್ಲಿರುವ ಮನೆಯ ಸುತ್ತ ಪ್ರವಾಹದ ನೀರು ಶೇಖರಣೆಗೊಂಡು ಮನೆ ಮುಳುಗುವ ಭೀತಿಯಲ್ಲಿದ್ದ ವೇಳೆ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್ ನಿರ್ಧೇಶನದಂತೆ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಬ್ಬರ್ ಬೋಟಿನ ಸಹಾಯದೊಂದಿಗೆ ಮನೆಯೋಳಗಿದ್ದ ಮೂರು ಮಂದಿಯನ್ನು ರಕ್ಷಿಸಿದ್ದಾರೆ.ಫಣಿಯೂರಿನ ಬೈಲು ತೋಟ ನಿವಾಸಿ ಗಣೇಶ್ ಶೆಟ್ಟಿ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಪಕ್ಕದಲ್ಲೇ ಇರುವ ರೈಲು ಮಾರ್ಗದ ಅಡಿಯಲ್ಲಿ ನೀರು ಹರಿದು ಹೋಗಲು ನಿರ್ಮಿಸಿದ ಮೋರಿಯನ್ನು ರೈಲ್ವೆ ಇಲಾಖೆ ನಿರ್ವಾಹಣೆ ಮಾಡದ ಕಾರಣ ಈ ಭಾಗದಲ್ಲಿ ನಿರಂತರವಾಗಿ ಕೃತಕ ನೆರೆ ಉಂಟಾಗುತ್ತಿದೆ. ಮನೆಮಂದಿಗೆ ಈ ಕೃತಕ ನೆರೆಯ ಬಗ್ಗೆ ಮಾಹಿತಿ ಇದ್ದರೂ ಹುಂಬು ಧೈರ್ಯ ಮಾಡಿ ಮನೆಯಲ್ಲೇ ಉಳಿಯುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಸ್ಥಳೀಯರು ಎಚ್ಚರಿಕೆ ನೀಡಿದರೂ ಕೇಳಲ್ಲಿಲ್ಲ ಎನ್ನಲಾಗಿದೆ. ಆ ಬಳಿಕ ಸ್ಥಳೀಯರೆ ಸಂಬಂಧಪಟ್ಟ ಶಿರ್ವ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರೊಂದಿಗೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಕಾರ್ಯಚರಣೆಗೆ ಬೆಂಬಲ ನೀಡಿ ಅಪಾಯದಲ್ಲಿದ್ದ ಮನೆಮಂದಿಯನ್ನು ರಕ್ಷಣೆ ಮಾಡಿದ್ದಾರೆ.

Related posts

Leave a Reply