Header Ads
Header Ads
Header Ads
Breaking News

ಪತಿಯಿಂದಲೇ ಪತ್ನಿ ಮಕ್ಕಳ ಮತಾಂತರಕ್ಕೆ ಒತ್ತಾಯ-ಆರೋಪಿಯನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು

ಕುಂದಾಪುರ: ವಿವಾಹಿತನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನ ಒತ್ತಾಯ ಪೂರ್ವಕವಾಗಿ ಮತಾತಂರ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.


ವಲೇರಿಯನ್ ಬುತ್ತೆಲ್ಲೋ ಬಂಧಿತ ಆರೋಪಿಯಾಗಿದ್ದು, ತನ್ನ ಪತ್ನಿಯಾದ ಸೆಲಿನ್ ಬುತ್ತೆಲ್ಲೋರನ್ನ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
31 ವರ್ಷಗಳ ಹಿಂದೆ ವಲೇರಿಯನ್ ಮತ್ತು ಸೆಲಿನ್ ಗಂಗೊಳ್ಳಿಯ ಚರ್ಚ್‌ವೊಂದರಲ್ಲಿ ಕೈಸ್ತ ಸಂಪ್ರದಾಯದಂತೆ ವಿವಾಹವಾಗಿ “ಪಿಯಾವಿಲ್ಲಾ” ರಾಮರಾಯ್ ಕೊಡಂಚಾ ರೋಡ್ ಗುಜ್ಜಾಡಿ ಗ್ರಾಮದಲ್ಲಿ ವಾಸವಾಗಿದ್ದರು. ಸುಮಾರು 2 ವರ್ಷಗಳ ವಲೇರಿಯನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಸೆಲಿನ್ ಮತ್ತು ಅವಳ ಇಬ್ಬರು ಮಕ್ಕಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡಿದ್ದು, ಒಪ್ಪದಿದ್ದಾಗ ಕ್ರೈಸ್ತ ಧರ್ಮಕ್ಕೆ ಸೇರಿದ ವಿಗ್ರಹ ಮತ್ತು ಪುಸ್ತಕಗಳನ್ನು ನಾಶ ಮಾಡಿದ್ದ. ಹಲವಾರು ಬಾರಿ ಕಟ್ಟಿಗೆಯಿಂದ ಹೊಡೆದು ಚಿತ್ರಹಿಂಸೆ ನೀಡಿ ಮನೆಯಿಂದ ಓಡಿಸಿದ್ದ ಎಂದು ದೂರಿನಲ್ಲಿ ಸೆಲಿನ್ ಹೇಳಿಕೊಂಡಿದ್ದಾಳೆ.
ಈಗ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೆಲಿನ್‌ಗೆ ಹಲ್ಲೆ ನಡೆಸಿದ ಕುರಿತು ದೂರು ದಾಖಲಾದ ಹಿನ್ನೆಲೆ, ಆರೋಪಿ ವಲೇರಿಯನ್‌ನನ್ನ ಬಂಧಿಸಲಾಗಿದೆ.
ವರದಿ: ಹರೀಶ್ ಕುಂದಾಪುರ

Related posts

Leave a Reply