Header Ads
Header Ads
Breaking News

ಪತ್ನಿ ಮಕ್ಕಳನ್ನು ಕೊಂದು ವ್ಯಕ್ತಿ ನೇಣಿಗೆ ಶರಣು

ಕುಂದಾಪುರ : ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದ ವ್ಯಕ್ತಿಯೋರ್ವ ನೇಣಿಗೆ ಕೊರಳೊಡ್ಡಿದ ಹೃದಯವಿದ್ರಾವಕ ಘಟನೆ ಶಂಕರನಾರಾಯಣ ಪೆÇಲೀಸ್ ಠಾಣಾ ವ್ಯಾಪ್ತಿಯ ಬೆಳ್ವೆ ಗ್ರಾಮದ ಸೆಟ್ವಳ್ಳಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕೃಷ್ಣ ಅಲ್ಸೆ ಎಂಬುವರ ಮಗ ಸೂರ್ಯನಾರಾಯಣ ಭಟ್ (50) ಎಂಬಾತ ಪತ್ನಿ ಮಾನಸಿ(40) ಮಕ್ಕಳಾದ (14) ಸುಧೀಶ್ (8) ಅವರನ್ನು ಹತ್ಯೆ ಮಾಡಿ ತಾನೂ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೃಷಿಕರಾಗಿದ್ದ ಸೂರ್ಯನಾರಾಯಣ ಭಟ್ ಬಿಡುವಿನ ವೇಳೆಯಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಬುಧವಾರ ಸಂಜೆ ಅಡುಗೆ ಕೆಲಸಕ್ಕೆ ಹೋಗುವುದಾಗಿ ಒಪ್ಪಿಕೊಂಡಿದ್ದರು. ಆದರೆ ಕೆಲಸಕ್ಕೆ ಹೋಗದೇ ಇದ್ದಾಗ ಅಡುಗೆಯವರು ಸೂರ್ಯನಾರಾಯಣ್ ಭಟ್ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಬಂದಿದ್ದು, ಪತ್ನಿಯ  ಫೊನ್  ಕೂಡ ಸ್ವಿಚ್ ಆಪ್ ಆಗಿತ್ತು. ಬಳಿಕ ಅವರ ಅಣ್ಣನಿಗೆ ಕರೆ ಮಾಡಿದ್ದು ಅಣ್ಣ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸೂರ್ಯನಾರಾಯಣ ಭಟ್, ಮೊದಲಿನಿಂದಲೂ ಮುಂಗೋಪಿಯಾಗಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದು, ಪ್ರತೀ ದಿನ ಬೆಳಿಗ್ಗೆ ಸಮೀಪದ ಅಂಗಡಿಯೊಂದಕ್ಜೆ ಹೋಗಿ ಪತ್ರಿಕೆ ಓದಿ ಬರುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ಅಂಗಡಿಗೆ ಹೋಗಿರಲಿಲ್ಲ ಎನ್ನಲಾಗಿದೆ. ಇದರಿಂದ ಸೂರ್ಯನಾರಾಯಣ ಪೂರ್ವಸಿದ್ಧತೆ ಮಾಡಿಕೊಂಡಿದ್ದರೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಬುಧವಾರ ನಸುಕಿನಲ್ಲಿಯೇ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿದ ಬಳಿಕ ತಲೆಗೆ ಹರಿತವಾದ ಆಯುಧದಿಂದ ಚುಚ್ಚಿ ಕೊಲ್ಲಲಾಗಿದೆ ಎಂದು ಶಂಕಿಸಲಾಗಿದ್ದು ತಲೆಯಲ್ಲಿ ಚುಚ್ಚಿದ ಗಾಯಗಳಿವೆ.

ಇನ್ನು ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಮಗ ಸುಧೀಂದ್ರ ಹೆಬ್ರಿಯ ಎಸ್ ಆರ್ ಎಸ್ ಶಾಲೆಯಲ್ಲಿ ಎಂಟನೇ ತರಗತಿ ಹಾಗೂ ಸುಧೀಶ್ ಅದೇ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದರು.

ಘಟನಾ ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣಿಪಾಲದ ವಿಧಿ ವಿಜ್ಞಾನ ತಜ್ಞರು, ಶ್ವಾನ ದಳ, ಬೆರಳಚ್ಚು ತಜ್ಞರು ಪರೀಕ್ಷಿಸಿದ ಬಳಿಕ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಮೃತದೇಹಗಳನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *